ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎ.15ರಂದು ಬಿಸುಪರ್ಬ ಆಚರಿಸಲಾಯಿತು.
ತುಳುನಾಡಿನಲ್ಲಿ ಬೆಳೆಯುವ ವಿವಿಧ ರೀತಿಯ ತರಕಾರಿ, ಹಣ್ಣು-ಹಂಪಲುಗಳೊಂದಿಗೆ “ಬಿಸು ಕಣಿ” ಇಟ್ಟು ಬಿಸು ಪರ್ಬವನ್ನು ಆಚರಿಸಲಾಯಿತು. ನಂತರ ಎಲ್ಲಾ ಶಿಕ್ಷಕರು ಹಿರಿಯರ ಆಶೀರ್ವಾದ ಪಡೆದರು.
ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕಾರ್‍ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ತುಳು ಭಾಷಿಕರಿಗೆ ಬಿಸು ಹೊಸ ವರ್ಷದ ಆರಂಭದ ಸಂಕೇತವಾಗಿದೆ. ಬಿಸು ಆಚರಣೆಯಿಂದ ನಮ್ಮ ಧಾರ್ಮಿಕತೆಗೆ ಗಟ್ಟಿ ಸ್ವರೂಪ ಬರಲಿ, ಸಂಸ್ಕಾರದ ಅರಿವು ಮೂಡಲಿ ಎಂದು ಆಶಿಸಿದರು. ತುಳುನಾಡಿನ ಮೊದಲ ಹಬ್ಬವಾದ ಬಿಸುಪರ್ಬದ ವಿಶೇಷತೆ ಹಾಗೂ ಬಿಸು ಹಬ್ಬದಂದು ಇಡುವ ಕಣಿಗೆ ಇರುವ ಮಹತ್ವವನ್ನು ಸಹಶಿಕ್ಷಕಿ ಸರಿತಾ ಜನಾರ್ದನ್‌ರವರು ತಿಳಿಸಿದರು.
ಶಾಲಾ ಆಡಳಿತಾಧಿಕಾರಿ ಆನಂದ್ ಎಸ್.ಟಿ, ತಾಂತ್ರಿಕ ಸಲಹೆಗಾರ ಜಯೇಂದ್ರ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೋಹಿತಾ ಎ ವಂದಿಸಿದರು. ಸಹಶಿಕ್ಷಕಿ ಅಕ್ಷತಾ ಟಿ ಕಾರ್‍ಯಕ್ರಮ ನಿರೂಪಿಸಿದರು.