





ಮುಳಿಯ ಚಿನ್ನದ ಮಳಿಗೆಯಿಂದ ಕಂಪ್ಯೂಟರ್, ಪ್ರಿಂಟರ್ ಕೊಡುಗೆ


ಪುತ್ತೂರು: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುರಿಯ ಇಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ, ಬೀಳ್ಕೊಡುಗೆ ಕಾರ್ಯಕ್ರಮ ಹಾಗೂ ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಇವರಿಂದ ಕಂಪ್ಯೂಟರ್ ಮತ್ತು ಪ್ರಿಂಟರ್ ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.





ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಎಂ.ಎಸ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಆರ್ಯಾಪು ಗ್ರಾ.ಪಂ ಸದಸ್ಯರು ಹಾಗೂ ಶಾಲಾ ಎಸ್ಡಿಎಂಸಿ ನಾಮ ನಿರ್ದೇಶಿತ ಸದಸ್ಯರಾದ ಬೂಡಿಯಾರು ಪುರುಷೋತ್ತಮ ರೈ, ಗ್ರಾ.ಪಂ ಸದಸ್ಯರಾದ ಕಲಾವತಿ, ನಾಗೇಶ್ ಎಂ, ಎಸ್ಡಿಎಂಸಿ ಉಪಾಧ್ಯಕ್ಷೆ ಮೀನಾಕ್ಷಿ ಹಾಗೂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ ಕಮಲ ಭಾಗವಹಿಸಿದ್ದರು. ಸಂತ ಪಿಲೊಮಿನಾ ಫ್ರೌಢಶಾಲಾ ಸಹಶಿಕ್ಷಕ ರೋಶನ್ ಸಿಕ್ವೇರಾ ಮಾರ್ಗದರ್ಶಕರಾಗಿ ಭಾಗವಹಿಸಿದ್ದರು.
ಮುಳಿಯ ಜುವೆಲ್ಲರ್ಸ್ ಪುತ್ತೂರು ಶಾಖೆಯ ವ್ಯವಸ್ಥಾಪಕ ರಾಘವೇಂದ್ರ ಪಾಟೀಲ್ ಮತ್ತು ಸಿಬ್ಬಂದಿಗಳು ಕಂಪ್ಯೂಟರ್ ಮತ್ತು ಕಲರ್ ಪ್ರಿಂಟರನ್ನು ಶಾಲೆಗೆ ಕೊಡುಗೆಯಾಗಿ ಹಸ್ತಾಂತರಿಸಿದರು. ಕುರಿಯ ಶಾಲೆಯ ಪ್ರಭಾರ ಮುಖ್ಯಗುರು ನವೀನ್ ಕುಮಾರ್ ಕೆ ಅವರು ಬಂಟ್ವಾಳ ತಾಲೂಕಿನ ಕುದ್ದುಪದವು ಕ್ಲಸ್ಟರ್ಗೆ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಪದೋನ್ನತಿಗೊಂಡಿದ್ದು ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಶಾಲಾ ಅಧ್ಯಾಪಕ ವೃಂದ, ವಿದ್ಯಾರ್ಥಿ ನಾಯಕಿ ಇನಾ ಫಾತಿಮ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದರು.
ಜಿಪಿಟಿ ಶಿಕ್ಷಕಿ ದಿವ್ಯಜ್ಯೋತಿ ಇವರು ಸಮುದಾಯದತ್ತ ಶಾಲಾ ಕಾರ್ಯಕ್ರಮ ಮತ್ತು ಬೀಳ್ಕೊಡುಗೆ ಸ್ವೀಕರಿಸಿದ ನವೀನ್ ಕುಮಾರ್ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶಾಲಾ ಪ್ರಭಾರ ಮುಖ್ಯಗುರು ನವೀನ್ ಕುಮಾರ್ ಕೆ ಸ್ವಾಗತಿಸಿದರು. ಅತಿಥಿ ಶಿಕ್ಷಕಿ ನಳಿನಿ ಕೆ ವಂದಿಸಿದರು. ಜಿಪಿಟಿ ಶಿಕ್ಷಕಿ ಕುಮಾರಿ ಕವಿತಾ ಪಿ.ಎನ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಕುಮಾರಿ ಕಾವ್ಯ ಸಹಕರಿಸಿದರು.


 
            
