ಪುತ್ತೂರು ತಾಲೂಕು ಆಡಳಿತ ಕಛೇರಿ ಮುಂದೆ ಮತದಾನ ಜಾಗೃತಿಯ ಬೀದಿನಾಟಕ

0

ಆಮೀಷಗಳಿಗೆ ಒಳಗಾಗದೆ ನಿಭೀರ್ತಿಯಿಂದ ಮತ ಚಲಾಯಿಸಿ – ನವೀನ್ ಕುಮಾರ್ ಭಂಡಾರಿ ಎಚ್


ಪುತ್ತೂರು: ವಿಧಾನಸಭಾ ಚುನಾವಣೆಯ ಮತದಾನಕ್ಕೆ 4 ವಾರಗಳು ಬಾಕಿ ಇರುವಂತೆಯೇ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ದ.ಕ ಜಿಲ್ಲಾ ‘ಸ್ವೀಪ್’ ಸಮಿತಿ ಸಜ್ಜಾಗಿದ್ದು, ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಅದರಂತೆ ಎ.18ರಂದು ಪುತ್ತೂರು ತಾಲೂಕು ಆಡಳಿತ ಕಛೇರಿ ಎದುರು ಮತದಾನ ಜಾಗೃತಿಗೆ ಬೀದಿನಾಟಕ ಪ್ರದರ್ಶನದ ಮೂಲಕ ಮತದಾರರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ, ಪುತ್ತೂರು ತಾಲೂಕು ಸ್ವೀಪ್ ಸಮಿತಿಯ ಸಹಕಾರದೊಂದಿಗೆ ರೋಟರಿ ಪುತ್ತುರು ಎಲೈಟ್ ಮತ್ತು ರೋಟರ್‍ಯಾಕ್ಟ್ ಕ್ಲಬ್ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜು ಇದರ ಸಹಯೋಗದೊಂದಿಗೆ ಮತದಾನ ಜಾಗೃತಿಯ ಬೀದಿನಾಟಕ ಪ್ರದರ್ಶನ ನಡೆಯಿತು. ಸಂಸಾರ ಜೋಡುಮಾರ್ಗ ತಂಡದ ಸಂಚಾಲಕ ಪತ್ರಕರ್ತ ಮೌನೇಶ್ ವಿಶ್ವಕರ್ಮ ಬೀದಿನಾಟಕದ ನೇತೃತ್ವ ವಹಿಸಿಕೊಂಡಿದ್ದರು.


ಆಮೀಷಗಳಿಗೆ ಒಳಗಾಗದೆ ನಿಭೀರ್ತಿಯಿಂದ ಮತ ಚಲಾಯಿಸಿ:
ಬೀದಿ ನಾಟಕದ ರೂವಾರಿಯರಾಗಿರುವ ಸಹಾಯಕ ಚುನಾವಣಾಧಿಕಾರಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್ ಅವರು ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿ ಮತದಾರರು ಯಾವುದೇ ಆಮೀಷಗಳಿಗೆ ಒಳಗಾಗಬೇಡಿ. ನಿಭೀರ್ತಿಯಿಂದ ಮತ ಚಲಾಯಿಸಿ. ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಟಕ ಪ್ರದರ್ಶನ ಮಾಡಲಾಗುವುದು ಎಂದರು. ಸೆಕ್ಟರ್ ಅಧಿಕಾರಿಯಾಗಿರುವ ಜಿ.ಪಂ ಯೋಜನಾನಿರ್ದೇಶಕ ಜಯರಾಮ್, ತಹಸೀಲ್ದಾರ್ ಶಿವಶಂಕರ್ ಶುಭ ಹಾರೈಸಿದರು. ಉಪತಹಸೀಲ್ದಾರ್ ಸುಲೋಚನಾ, ರೋಟರಿ ಕ್ಲಬ್ ಎಲೈಟ್‌ನ ಅಧ್ಯಕ್ಷ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ಆಸ್ಕರ್ ಆನಂದ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಪುತ್ತೂರು ಬಸ್‌ ನಿಲ್ದಾಣ ಮುಂಬಾಗದಲ್ಲಿ ಪ್ರದರ್ಶನ ಮಾಡುತ್ತಿರುವ ದೃಶ್ಯ

LEAVE A REPLY

Please enter your comment!
Please enter your name here