ಪುತ್ತೂರು: ಇಂಗ್ಲೀಷ್ ಮಾಧ್ಯಮದಲ್ಲಿ ಕೋರ್ಸ್‌ಗಳನ್ನು ಅಧ್ಯಯನ ಮಾಡಿದ್ದರೂ, ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವುದಕ್ಕೆ ಅವಕಾಶ ನೀಡುವಂತೆ ಭಾರತೀಯ ವಿ.ವಿ. ಅನುದಾನ ಆಯೋಗ(ಯುಜಿಸಿ)ವು ವಿಶ್ವವಿದ್ಯಾನಿಲಯಗಳಿಗೆ ನಿರ್ದೇಶನ ನೀಡಿದೆ.
ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವಲ್ಲಿ ಹಾಗೂ ಸ್ಥಳೀಯ ಭಾಷೆ ಅಥವಾ ಮಾತೃಭಾಷೆಗಳಲ್ಲಿ ಬೋಧನೆ -ಕಲಿಕಾ ಪ್ರಕ್ರಿಯೆಯಲ್ಲಿ ಉನ್ನತಮಟ್ಟದ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಯುಜಿಸಿ ಹೇಳಿದೆ.
ಇಂತಹ ಪ್ರಯತ್ನಗಳನ್ನು ಬಲಪಡಿಸಲು ಹಾಗೂ ಮಾತೃಭಾಷೆ ಅಥವಾ ಸ್ಥಳೀಯ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಬರೆಯುವುದಕ್ಕೆ ಉತ್ತೇಜನ ನೀಡಲು ಮತ್ತು ಇತರ ಭಾಷೆಗಳಿಂದ ಗುಣಮಟ್ಟದ ಪುಸ್ತಕಗಳ ಭಾಷಾಂತರದಂತಹ ಉಪಕ್ರಮಗಳು ಅಗತ್ಯವಾಗಿವೆ ಎಂದು ಯುಜಿಸಿ ಹೇಳಿದೆ.