





ಪುತ್ತೂರು: ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಗ್ರಾಮಕರಣಿಕರಾಗಿ ಸೇವೆ ಸಲ್ಲಿಸಿದ ನಿವೃತ್ತರಾಗಿದ್ದ ಕೂರ್ನಡ್ಕ ನಿವಾಸಿ ಅಬೂಖಾನ್(81ವ)ರವರು ಕೆಲವು ದಿನಗಳ ಅಸೌಖ್ಯದಿಂದಾಗಿ ಏ.19ರಂದು ಸ್ವಗೃಹದಲ್ಲಿ ನಿಧನಾದರು.


ಅವರು ಕೂರ್ನಡ್ಕ ಪೀರ್ ಮೊಹಲ್ಲ ಜುಮ್ಮಾ ಮಸೀದಿ ಕಮಿಟಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪುತ್ತೂರಿನ ಹೆಸರಾಂತ ಆಯ್ಕೆ ಸಪ್ಲಾಯ್ಸ್ ಮಾಲಕ ರಜಾಕ್ ಖಾನ್ ಮತ್ತು ದಿ.ಇಸಾಕ್ ಖಾನ್ ಅವರ ಸಹೋದರರಾಗಿದ್ದಾರೆ. ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.











