ಪುತ್ತೂರು:2023ರ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಪುತ್ತೂರಿನ ಮಾಯಿದೇ ದೇವುಸ್ ಸಮೂಹ ವಿದ್ಯಾಸಂಸ್ಥೆಯಲ್ಲೊಂದಾದ ದರ್ಬೆ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ದ್ವಿತೀಯ ಪಿ.ಯು.ಸಿ.ಬೋರ್ಡ್ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದಿದೆ. ಕಾಲೇಜಿನ 2022-23ನೇ ಬ್ಯಾಚ್ ವಿದ್ಯಾರ್ಥಿಗಳು ದ್ವಿತೀಯ ಪಿ.ಯು.ಸಿಯಲ್ಲಿ ಶೇ.96.31 ಅಂಕ ಗಳಿಸಿ ಸಾಧನೆ ತೋರಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸಮೃದ್ಧಿ ಆರ್ ರೈ 588/600 ಅಂಕ ಪಡೆದು ರಾಜ್ಯಕ್ಕೆ 10ನೇ ರ್ಯಾಂಕ್ ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಸಂಜನಾ ಜೆ. ರಾವ್ 555/600 ಅಂಕ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸಂಜನಾ ಕೆ. 584/600 ಅಂಕ ಗಳಿಸಿದ್ದಾರೆ. 569 ವಿದ್ಯಾರ್ಥಿಗಳಲ್ಲಿ 171 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 313 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗ:
ವಿಜ್ಞಾನ ವಿಭಾಗದ ಒಟ್ಟು 293 ವಿದ್ಯಾರ್ಥಿಗಳಲ್ಲಿ 91 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 167 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ರಶ್ಮಿ ಎಂ.ಡಿ. 579, ತಸ್ವಿ ಕೆ .ಜೆ 575, ಎಂ.ಪುನೀತ್ 575, ಸಾತ್ವಿಕ್ ಕಾಮತ್ 574, ರಿಶಿತಾ ಸುಹಾನಿ ಡಿಸೋಜ 573, ತನಿಷಾ ಪಿ.ರೈ 572, ಸಫ್ರೀನ್ ಫರ್ಹಾನ್ 572, ತನ್ವಿ ರೈ ಎನ್. 571, ಪಿ.ಶ್ರೇಯ ಶೆಟ್ಟಿ 571, ತನಿಷಾ ಶೇಕ್ 580, ಲೇಖಾ ಎಸ್. 576, ಪೂರ್ವಿ. ರೈ ಕೆ. 578, ಮಹಮ್ಮದ್ ಜಿಯಾದ್ದೀನ್ 579 ಅಂಕಗಳನ್ನು ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗ:
ವಾಣಿಜ್ಯ ವಿಭಾಗದ ಒಟ್ಟು 241 ವಿದ್ಯಾರ್ಥಿಗಳಲ್ಲಿ 77 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 121 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಶ್ರೇಯಾ ಎಚ್.ಎಂ. 584 ಸೊಲಿಟ ಬ್ಲೋಸಂ ಫೆರಾವೊ 581, ಕರಿಷ್ಮಾ ವೈ. 581, ಪ್ರಫುಲ್ಲಾ ಜ್ಯೋತ್ಸ್ನಾ ನೊರೊನ್ನಾ 579, ಮಾಹಿ ಜೆ. ಹೆಗ್ಡೆ 579, ದರ್ಶನ್ 579, ಅನ್ವಿತಾ ಜೆನೆಟ್ ಡಿಸೋಜ 579, ಕೆ.ಶ್ರೇಯಸ್ ಕಾಮತ್ 576, ಕೃತಿಕ್ ಕೆ.ಟಿ. 575, ಸೃಜನ ಎ. 574, ವೆರೋನ್ ಲೆವಿನ್ 573 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಕಲಾ ವಿಭಾಗ:
ಕಲಾ ವಿಭಾಗದ ಒಟ್ಟು 35 ವಿದ್ಯಾರ್ಥಿಗಳಲ್ಲಿ 03 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 25 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಮಹಮ್ಮದ್ ಅಜೀಮ್ 554,
ಮುನಾಝ ಬೇಗಂ 551 ಅಂಕಗಳನ್ನು ಪಡೆದುಕೊಂಡಿದ್ದಾರೆ.