ಏ.28 ರಿಂದ ಮೇ 1- ಸೂರಂಬೈಲು ಬಾರಿಕೆ ತರವಾಡು ಶ್ರೀ ಮಲರಾಯಿ ಧರ್ಮದೈವಗಳ ನೇಮೋತ್ಸವ

0

ಪಾಣಾಜೆ: ಪಾಣಾಜೆ ಗ್ರಾಮದ ಸೂರಂಬೈಲು ಬಾರಿಕೆ ತರವಾಡು ಶ್ರೀ ಮಲರಾಯಿ ದೈವಸ್ಥಾನ ದಲ್ಲಿ ಧರ್ಮದೈವಗಳ ನೇಮೋತ್ಸವಾದಿಗಳು ಏ. 28 ರಂದು ಆರಂಭಗೊಂಡು ಮೇ 1 ರವರೆಗೆ ನಡೆಯಲಿದೆ. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದೊಂದಿಗೆ ವೇ.ಮೂ.‌ದಿನೇಶ್ ಮರಡಿತ್ತಾಯರ ಪೌರೋಹಿತ್ಯದಲ್ಲಿ ಸೂರಂಬೈಲು ಮೂಲ ತರವಾಡಿಗೆ ಕಾಮಜಾಲು ಕುಟುಂಬಸ್ಥರ ಸೇರ್ಪಡೆಯ ಪ್ರಯುಕ್ತ ಧರ್ಮದೈವಗಳ ನೇಮೋತ್ಸವಾದಿಗಳು ನಡೆಯಲಿದೆ.

ಏ. 29 ರಂದು ಬೆ.9 ರಿಂದ ರಾಜನ್‌ ದೈವ ನೇಮ, ಅನ್ನಸಂತರ್ಪಣೆ, ಮಧ್ಯಾಹ್ನ ವರ್ಣರ ಪಂಜುರ್ಲಿ ದೈವದ ನೇಮ, ಸಂಜೆ ಕಲ್ಲುರ್ಟಿ ದೈವದ ನೇಮ, ರಾತ್ರಿ ಅನ್ನಸಂತರ್ಪಣೆ, ಕೊರತಿ ದೈವದ ನೇಮ ನಡೆಯಲಿದೆ.


ಏ.30ರಂದು- ಬೆಳಿಗ್ಗೆ ಭಂಡಾರ ಇಳಿಸುವುದು, ಬೆ.9ಕ್ಕೆ ಧರ್ಮದೈವ ಶ್ರೀ ಮಲರಾಯಿ ದೈವದ ನೇಮ ನಂತರ ಅನ್ನಸಂತರ್ಪಣೆ ನಡೆಯಲಿದೆ. ಮೇ 1ರಂದು ಬೆಳಿಗ್ಗೆ ವರ್ಣರ ಪಂಜುರ್ಲಿ ದೈವದ ನೇಮ, ಬೆ.11ಕ್ಕೆ ಧರ್ಮದೈವ ಶ್ರೀ ಮಲರಾಯಿ ದೈವದ ಹರಕೆ ನೇಮ ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ತರವಾಡು ಮನೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here