ಪುಣಚ: ಕೇಪು ಗ್ರಾಮದ ಕಲ್ಲಂಗಳ ಗುತ್ತು ತರವಾಡು ಮನೆಯ ದೈವಸ್ಥಾನದಲ್ಲಿ ಎ.28 ರಂದು ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಯವರ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ, ತಾಂತ್ರಿಕ ಕಾರ್ಯಕ್ರಮಗಳೊಂದಿಗೆ ಚಂಡಿಕಾ ಹೋಮ ನಡೆಯಿತು.
ಎ.27ರಂದು ರಾತ್ರಿ ಪಂಚಗವ್ಯ ಪುಣ್ಯಾಹ, ಸುದರ್ಶನ ಹೋಮದೊಂದಿಗೆ ಆರಂಭಗೊಂಡಿತು.
ಎ.28 ರಂದು ಬೆಳಿಗ್ಗೆ ದೈವಗಳಿಗೆ ಮತ್ತು ನಾಗ ಸನ್ನಿಧಿಯಲ್ಲಿ ಸಾನಿಧ್ಯ ಕಲಶಾಭಿಷೇಕ, 12ಸಾವಿರ ತಿಲ ಹೋಮ, ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ನಾರಾಯಣ ಬಲಿ ಹೋಮ, ಚಂಡಿಕಾ ಹೋಮ, ಕಲಶಾಭಿಷೇಕ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು. ಕಲ್ಲಂಗಳ ಗುತ್ತು ಕುಟುಂಬಸ್ಥರು, ಬಂಧುಮಿತ್ರರು, ಉಪಸ್ಥಿತರಿದ್ದರು.