ಮಂಗಳೂರುನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ

0

ಪುತ್ತೂರು:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏ.29ರಂದು ಇಳಿಸಂಜೆ ಮಂಗಳೂರಿನಲ್ಲಿ ದಕ್ಷಿಣ ಶಾಸಕ, ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಪರ ಬೃಹತ್ ರೋಡ್‌ಶೋ ನಡೆಸಿದರು.

ನಗರದ ಕ್ಲಾಕ್‌ಟವರ್‌ನಿಂದ ಆರಂಭವಾದ ಅಮಿತ್ ಶಾ ಅವರ ರೋಡ್‌ಶೋ ಹಂಪನಕಟ್ಟೆ ಸಿಗ್ನಲ್, ಕೆ.ಎಸ್.ರಾವ್ ರಸ್ತೆ ಮೂಲಕ ಸಾಗಿ ಸಿಟಿ ಪಾಯಿಂಟ್‌ನ ಗೋವಿಂದ ಪೈ ವೃತ್ತವರೆಗೆ ಸಂಚರಿಸಿತು. ರೋಡ್‌ಶೋನಲ್ಲಿ ಅಮಿತ್ ಶಾ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅಭ್ಯರ್ಥಿ ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಜತೆಗಿದ್ದರು.

LEAVE A REPLY

Please enter your comment!
Please enter your name here