ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನವದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಎನರ್ಜಿ ಸ್ವರಾಜ್ ಫೌಂಡೇಶನ್ ಅಟಲ್ ಇನ್ನೋವೇಶನ್ ಮಿಷನ್(NITI AAyog) ಮತ್ತು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (AICTE) ಸಹಯೋಗದೊಂದಿಗೆ ‘ಮದರ್ ಅರ್ಥ್ ಡೇ’ ವಿಶೇಷ ದಿನವಾದ ಎಪ್ರಿಲ್ 22ರಂದು ಸಂಸ್ಥೆಯಿಂದ 10ನೇ ತರಗತಿಯ ಕಾರ್ತಿಕೇಯ ವಾಗ್ಲೆ (ಮಂಜಲಡ್ಪು ಶ್ರೀಪ್ರಕಾಶ್ ವಾಗ್ಳೆ ಬಿ ಮತ್ತು ಸುಲೋಚನ ಎಸ್ ರವರ ಪುತ್ರ), ಶ್ರೀವತ್ಸ ಬಿ (ಬನ್ನೂರು ಮಂಜುನಾಥಯ್ಯ ಬಿ ಮತ್ತು ಮೀನಾಕ್ಷಿ ಬಿ ರವರ ಪುತ್ರ), ಕಷೀಶ್ ಪಿ ಎಸ್ (ಚಿಕ್ಕಪುತ್ತೂರು ಸತೀಶ್ ಪಿ ಮತ್ತು ರಂಜಿನಿ ಎ ರವರ ಪುತ್ರಿ), ಪ್ರಕೃತಿ ವಿ ರೈ (ಪಾಂಗ್ಲಾಯಿ ವಿಠಲ ರೈ ಎ ಮತ್ತು ಚಿತ್ರಾ ರೈ ಎಸ್ ರವರ ಪುತ್ರಿ), 9ನೇ ತರಗತಿಯ ಅಕ್ಷಯ್ ಗಣೇಶ್ ಕೆ (ವರ್ಕಾಡಿ ರಘುರಾಮ ಎಸ್ ಮತ್ತು ವೈಶಾಲಿ ಎಂ ಆರ್ ರವರ ಪುತ್ರ), ಪ್ರಖ್ಯಾತ್ ಡಿ ರೈ ( ಬನ್ನೂರು ದಯಾನಂದ ರೈ ಮತ್ತು ಪ್ರತಿಭಾ ಕುಮಾರಿ ಪಿ ರವರ ಪುತ್ರ) ಹಾಗೂ ಮಾರ್ಗದರ್ಶಕ ಮತ್ತು ಅಟಲ್ ಮೆಂಟರ್ರಾಗಿ ಕಾವು ರಂಜಿತಾ ಹೆಚ್ ಶೆಟ್ಟಿ ಭಾಗವಹಿಸಿದ್ದು, ವಿಶ್ವ ದಾಖಲೆ ನಿರ್ಮಿಸಿದಂತಹ ಈ ಜಾಗತಿಕ ಹವಾಮಾನ ಗಡಿಯಾರದ ಮತ್ತು ಸ್ಮಾರ್ಟ್ ಟಿವಿ ಉದ್ಘಾಟನೆ ಕಾರ್ಯಕ್ರಮವು ದಿನಾಂಕ 16/05/2023 ರಂದು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಪುತ್ತೂರಿನ ಹೃದಯ ಭಾಗದಲ್ಲಿ 15-07-1981ರಂದು ಸ್ಥಾಪನೆಗೊಂಡು ಹಲವಾರು ದಾಖಲೆಗಳನ್ನು ನಿರ್ಮಿಸುತ್ತಾ, ಅಮೇರಿಕಾದ ಪಿಟ್ಸ್ಬರ್ಗ್, ನ್ಯೂಯಾರ್ಕ್, ನೆದರ್ಲ್ಯಾಂಡ್, ಶ್ರೀಲಂಕಾ, ಸಿಂಗಾಪುರದ ಏಲ್ ವಿಶ್ವವಿದ್ಯಾನಿಲಯ, ಜಪಾನಿನ ಕಿರಾರಹಮ, ಮಲೇಷಿಯಾ, ಮೆಕ್ಸಿಕೋ, ರಷ್ಯಾ ಮಂತಾದ ಕಡೆ ಸುಮಾರು 22 ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಸಮಾವೇಶಗಳಲ್ಲಿ ಭಾಗವಹಿಸಿ ವಿಜ್ಞಾನ ಯೋಜನಾ ವರದಿಗಳನ್ನು ಮಂಡಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕ ಪಡೆದ ಎಕೈಕ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಶೈಕ್ಷಣಿಕವಾಗಿ ತನ್ನದೇ ಆದ ಸಾಧನೆಯನ್ನು ಮಾಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಸರಾಸರಿ 97ಶೇ. ಫಲಿತಾಂಶವನ್ನು ದಾಖಲಿಸಿದೆ. ಅಲ್ಲದೇ ಎನ್.ಎಮ್.ಎಮ್.ಎಸ್ ಮತ್ತು ಎನ್.ಟಿ.ಎಸ್.ಇ ಪರೀಕ್ಷೆಯಲ್ಲಿ ಪ್ರತಿ ವರ್ಷವು ಆಯ್ಕೆಯಾಗುತ್ತಿದ್ದು, ಪ್ರಸ್ತುತ ಸಾಧನೆಯ ಮತ್ತೊಂದು ಮೆಟ್ಟಿಲು ಹವಾಮಾನ ಗಡಿಯಾರ ಸ್ಥಾಪಿಸಿ ಉದ್ಘಾಟನೆಗೊಳ್ಳುತ್ತಿದೆ.
ಪರಿಸರ ಜಾಗೃತಿ ಮತ್ತು ನಮ್ಮ ಸಾಮೂಹಿಕ ಭವಿಷ್ಯಕ್ಕಾಗಿ ಹೆಚ್ಚು ಸಮರ್ಥನೀಯ ಮಾರ್ಗಗಳನ್ನು ಅಳವಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಸೃಷ್ಟಿಸಲು ಪ್ರತಿ ವರ್ಷ ಎಪ್ರಿಲ್ 22ನ್ನು ಭೂಮಿಯ ದಿನವೆಂದು ಗುರುತಿಸಲಾಗುತ್ತದೆ. ಹವಾಮಾನ ಬದಲಾವಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ವಿವಿಧ ಶಕ್ತಿಯ ಅಗತ್ಯಗಳನ್ನು ಪೂರೈಸಲು ಪಳೆಯುಳಿಕೆ ಇಂಧನಗಳ ಅತಿಯಾದ ದಹನದಂತಹ ಮಾನವಜನ್ಯ ಚಟುವಟಿಕೆಗಳು ಹಸಿರುಮನೆ ಅನಿಲಗಳನ್ನು(GHGS) ಉತ್ಪಾದಿಸುತ್ತದೆ. ಇದು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಗೆ ಕೊಡುಗೆ ನೀಡುತ್ತದೆ. ಉದಾಹರಣೆಗೆ ಜಾಗತಿಕ ಶಕ್ತಿ – ಸಂಬಂಧಿತ ಹೊರಸೂಸುವಿಕೆಯು 2021 ರಲ್ಲಿ ಸುಮಾರು 42 ಬಿಲಿಯನ್ ಟನ್ಗಳ ದಾಖಲೆಯನ್ನು ತಲುಪಿದೆ. ಹವಾಮಾನ ಗಡಿಯಾರವು ತೋರಿಸಿರುವ ಸಮಯವನ್ನು ಎರಡು ಅಂಶಗಳಿಂದ ನಿರ್ಧರಿಸಲಾಗುತ್ತದೆ. ನಿರ್ದಿಷ್ಟ ಜಾಗತಿಕ ತಾಪಮಾನ ಏರಿಕೆಯ ತಾಪಮಾನವನ್ನು ತಲುಪಲು ಇಂಗಾಲದ ಬಜೆಟ್ ಎಷ್ಟು, ಮತ್ತು ಪ್ರಸ್ತುತ CO₂ ಹೊರಸೂಸುವಿಕೆಯ ದರ ಅಥವಾ ಹೆಚ್ಚು ಸರಿಯಾಗಿ ಹಸಿರುಮನೆ ಅನಿಲ ಹೊರಸೂಸುವಿಕೆ ಪ್ರಸ್ತುತ ಮಟ್ಟದ CO₂ ಮತ್ತು ಇತರ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಗಮನಿದರೆ ಹವಾಮಾನ ಗಡಿಯಾರವು ನಿರ್ಣಾಯಕ ಮಿತಿಯನ್ನು ಉಲ್ಲಂಘಿಸುವ ಮೊದಲು ಕೇವಲ ಆರು ವರ್ಷಗಳು ಮತ್ತು ತೊಂಬತ್ತೊಂದು ದಿನಗಳು ಉಳಿದಿವೆ. ಈ ಬಗ್ಗೆ ಜಾಗೃತಿಗಾಗಿ ಹವಾಮಾನ ಗಡಿಯಾರವು ಸ್ಥಾಪನೆಯ ಅಗತ್ಯವಾಗಿದೆ.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ವಹಿಸಲಿದ್ದು, ಹವಾಮಾನ ಗಡಿಯಾರದ ಉದ್ಘಾಟನೆಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮಂಗಳೂರು ಇದರ ಪ್ರಾಂಶುಪಾಲರು ಮತ್ತು ಉಪನಿರ್ದೇಶಕ (ಅಭಿವೃದ್ಧಿ) ರಾದ ರಾಜಲಕ್ಷ್ಮಿ ಕೆ, ಸ್ಮಾರ್ಟ್ ಟಿ.ವಿ ಯ ಉದ್ಘಾಟನೆಯನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾಗಳಾದ ಲೋಕೇಶ್ ಎಸ್ ಆರ್ ಮುಖ್ಯ ಅಥಿತಿಗಳಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು ಇದರ ಉಪನ್ಯಾಸಕರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಅಟಲ್ ಟಿಂಕರಿಂಗ್ ಲ್ಯಾಬ್ ಗಳಾದ ವೇದಾವತಿ ಬಿ ಕೆ, ಎನ್.ಐ.ಟಿಕೆ. ರಾಸಾಯನಶಾಸ್ತ್ರದ ಪ್ರೋಫೆಸರ್ ಆದ ಅರುಣ್ ಎಂ ಇಸ್ಲೂರು, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಹರೀಶ್ ಶಾಸ್ತ್ರಿ ಬಿ ಬಂಟರ ಯಾನೆ ನಾಡವರ ಮಾತೃ ಸಂಘ, ತಾಲೂಕು ಸಮಿತಿ ಪುತ್ತೂರು ಇದರ ಸಂಚಾಲಕರಾದ ದಯಾನಂದ ರೈ ಮನವಳಿಕೆಗುತ್ತು, ಪುತ್ತೂರು ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್ ಇವರು ಭಾಗವಹಿಸಲಿದ್ದಾರೆ ಎಂದು ಶಾಲಾ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮತ್ತು ಮುಖ್ಯೋಪಾಧ್ಯಾಯನಿ ಜಯಲಕ್ಷಿ ಎ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.