ಕಾವು ಪುತ್ತಿಲರ ಫ್ಲೆಕ್ಸ್‌ಗೆ ರಾತ್ರಿ ವೇಳೆ ಕಲ್ಲು ತೂರಾಟ-ಸ್ಥಳದಲ್ಲಿ ಜಮಾಯಿಸಿದ ಪುತ್ತಿಲ ಅಭಿಮಾನಿಗಳು

0

ಸ್ಥಳಕ್ಕಾಗಮಿಸಿದ ಅರುಣ್ ಪುತ್ತಿಲ, ಪೊಲೀಸರಿಂದ ಸಮಾಧಾನದ ಯತ್ನ

ಕಾವು: ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿರೋಚಿತ ಸೋಲು ಕಂಡಿದ್ದ ಅರುಣ್ ಕುಮಾರ್ ಪುತ್ತಿಲರವರಿಗೆ ಅಭಿನಂದನೆ ಸಲ್ಲಿಸಿ ಕಾವು ಪಂಚವಟಿನಗರದಲ್ಲಿ ಹಾಕಲಾಗಿದ್ದ ಬ್ಯಾನರ್‌ಗೆ ಜನರ ಎದುರಲ್ಲೇ ಕಿಡಿಗೇಡಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿ ತಪ್ಪಿಸಿಕೊಂಡ ಘಟನೆ ಮೇ.16ರಂದು ರಾತ್ರಿ 9.30ರ ಸುಮಾರಿಗೆ ನಡೆದಿದೆ.


ಪುತ್ತಿಲ ಅಭಿಮಾನಿ ಬಳಗದಿಂದ ಫ್ಲೆಕ್ಸ್ ಅಳವಡಿಕೆ:
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 62458 ಮತಗಳನ್ನು ಪಡೆದು ಸೋಲಿನಲ್ಲೂ ಇತಿಹಾಸ ಸೃಷ್ಟಿಸಿದ್ದ ಯುವ ನಾಯಕ ಅರುಣ್ ಕುಮಾರ್ ಪುತ್ತಿಲರವರಿಗೆ ಪುತ್ತಿಲ ಅಭಿಮಾನಿ ಬಳಗ ಕಾವು ಹೆಸರಿನಲ್ಲಿ ಅಭಿನಂದನೆ ಸಲ್ಲಿಸಿ ಕಾವುನಲ್ಲಿ ಮೇ.15ರಂದು ರಾತ್ರಿ ಫ್ಲೆಕ್ಸ್ ಅಳವಡಿಸಲಾಗಿತ್ತು ಮತ್ತು ಫ್ಲೆಕ್ಸ್ ಅಳವಡಿಸುವ ಮುನ್ನ ಅರಿಯಡ್ಕ ಗ್ರಾ.ಪಂ ನಿಂದ ಶುಲ್ಕ ಪಾವತಿಸಿ ಅನುಮತಿಯನ್ನು ಪಡೆಯಲಾಗಿತ್ತು.


ಮೇ.16ರಂದು ಫ್ಲೆಕ್ಸ್‌ಗೆ ಕಲ್ಲು ತೂರಾಟ:
ಮೇ.16ರಂದು ರಾತ್ರಿ 9.30ರ ಸುಮಾರಿಗೆ ಕಾವುನಲ್ಲಿ ಜನರ ಎದುರಲ್ಲೇ ಕಿಡಿಗೇಡಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿ ಪರಾರಿಯಾಗಿತ್ತು.


ಸ್ಥಳಕ್ಕೆ ಜಮಾಯಿಸಿದ ಪುತ್ತಿಲ ಅಭಿಮಾನಿಗಳು:
ಘಟನೆಯ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಪುತ್ತಿಲ ಅಭಿಮಾನಿಗಳು ಮತ್ತು ಸ್ಥಳೀಯರು ಸೇರಿ ಪೊಲೀಸರಿಗೆ ಮತ್ತು ಅರುಣ್ ಕುಮಾರ್ ಪುತ್ತಿಲರವರಿಗೆ ವಿಷಯ ತಿಳಿಸಿದರು.


ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅರುಣ್ ಕುಮಾರ್ ಪುತ್ತಿಲ:
ಮಾಹಿತಿ ದೊರೆತ ತಕ್ಷಣವೇ ಸಂಪ್ಯ ಪೊಲೀಸರು ಮತ್ತು ಅರುಣ್ ಕುಮಾರ್ ಪುತ್ತಿಲರವರು ಸ್ಥಳಕ್ಕಾಗಮಿಸಿ ನೆರೆದಿದ್ದ ಜನರನ್ನು ಸಮಾಧಾನ ಪಡಿಸಿ, ಘಟನೆಗೆ ಕಾರಣಕರ್ತರಾಗಿರುವ ಕಿಡಿಗೇಡಿಗಳನ್ನು ಹಿಡಿದು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುವ ಭರವಸೆ ನೀಡಿ ಪರಿಸ್ಥಿಯನ್ನು ಸುಗಮಗೊಳಿಸಿದರು.


ಸ್ಥಳಿಯರಿಂದಲೇ ಕೃತ್ಯ:
ಕಲ್ಲು ತೂರಾಟ ನಡೆಸಿರುವವರು ಸ್ಥಳಿಯರೇ ಆಗಿದ್ದು, ಈ ಬಗ್ಗೆ ಖಚಿತ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದು, ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಹಾಗಾಗಿ ಈ ಬಗ್ಗೆ ಯಾರೂ ವಿಚಲಿತರಾಗದಂತೆ ಪುತ್ತಿಲ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

LEAVE A REPLY

Please enter your comment!
Please enter your name here