ನಿಡ್ಪಳ್ಳಿ; ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಬುಗ್ಗೆ ಎಂದು ಪ್ರಸಿದ್ಧಿ ಪಡೆದ ಇರ್ದೆ ಗ್ರಾಮದ ಬೆಂದ್ರ್ ತೀರ್ಥ ಕ್ಷೇತ್ರಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಮೆ.17 ರಂದು ಭೇಟಿ ನೀಡಿದರು.
ಈ ಪುಣ್ಯ ಕ್ಷೇತ್ರವನ್ನು ಪರಿಶೀಲಿಸಿದ ಸಹಾಯಕ ನಿರ್ದೇಶಕರು ಅಲ್ಲಿಯ ಸಂಪೂರ್ಣ ವಿವರವನ್ನು ಪಡೆದುಕೊಂಡರು. ಇದನ್ನು ಒಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ಧಿ ಗೊಳಿಸಿ ಹಿಂದುಗಳ ಒಂದು ಪ್ರವಾಸಿ ಧಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಅಲ್ಲದೆ ಇದರ ಅಭಿವೃದ್ಧಿಗೆ ಬೇಕಾದ ಅನುದಾನ ಬಿಡುಗಡೆಗೆ ಒತ್ತಾಯಿಸಿ ಪುತ್ತೂರು ಶಾಸಕರಿಗೂ ಒಂದು ಮನವಿ ಸಲ್ಲಿಸಲು ಹೇಳಿದ್ದಾರೆ ಎಂದು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ರೈ ಬೈಲಾಡಿ ಮತ್ತು ಇರ್ದೆ ಶ್ರೀ ವಿಷ್ಣು ಮೂರ್ತಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ದೇವಪ್ಪ ನಾಯ್ಕ ಉಪ್ಪಳಿಗೆ ಮಾಧ್ಯಮಕ್ಕೆ ತಿಳಿಸಿದ್ದಾರೆ.ನಂತರ ಇರ್ದೆ ಗೋಪಾಲ ಕ್ಷೇತ್ರ ಶ್ರೀ ವಿಷ್ಣು ಮೂರ್ತಿ ದೇವಾಲಯಕ್ಕೂ ಎ.ಸಿ ಯವರು ಭೇಟಿ ನೀಡಿ ಅಲ್ಲಿಯ ಜೀರ್ಣೋದ್ಧಾರ ಬಗ್ಗೆಯೂ ಪರಿಶೀಲಿಸಿದರು.
ಧಾರ್ಮಿಕ ದತ್ತಿ ಇಲಾಖೆಯ ಇನ್ಸ್ಪೆಕ್ಟರ್ ಶ್ರೀಧರ್, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ರೈ ಬೈಲಾಡಿ ಅವರ ಜತೆಗಿದ್ದರು.