ಕಾವು ಪುತ್ತಿಲ ಅಭಿಮಾನಿ ಬಳಗದಿಂದ ಅರುಣ್ ಪುತ್ತಿಲರಿಗೆ ಅಭಿನಂದನೆ-ಕಾರ್ಯಕರ್ತರಿಗೆ ಕೃತಜ್ಞತಾ ಸಭೆ

0

ಪುತ್ತೂರು: ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಹಿಂದುತ್ವದ ಆಧಾರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, 62458 ಮತಗಳನ್ನು ಪಡೆದು, ವಿರೋಚಿತ ಸೋಲಿನಲ್ಲೂ ಇತಿಹಾಸ ಸೃಷ್ಠಿಸಿದ್ದ ಅರುಣ್ ಕುಮಾರ್ ಪುತ್ತಿಲರವರಿಗೆ ಪುತ್ತಿಲ ಅಭಿಮಾನಿ ಬಳಗ ಕಾವು ಇವರ ನೇತೃತ್ವದಲ್ಲಿ ಅಭಿನಂದನೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯು ಮೇ.18ರಂದು ಸಂಜೆ ಕಾವು ನನ್ಯ ಜನಮಂಗಲ ಸಭಾಭವನದಲ್ಲಿ ನಡೆಯಿತು.

ಚಿತ್ರ: ಸ್ವಸ್ತಿಕ್ ಕಾವು

ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸಿ, ಕಾರ್ಯಕ್ರಮ ಆರಂಭಗೊಂಡಿತು. ಉದ್ಯಮಿ ರಾಜಶೇಖರ್ ಬೆಂಗಳೂರು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಕಾವು ಕೆರೆಮಾರು ಅಯ್ಯಪ್ಪ ಭಜನಾ ಮಂದಿರದ ಸ್ಥಾಪಕಾಧ್ಯಕ್ಷ ಸುಂದರ ಪೂಜಾರಿ ಕೆರೆಮಾರು, ಹಿರಿಯರಾದ ಮಹಾಲಿಂಗೇಶ್ವರ ಭಟ್ ಪಳನೀರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಭಿನಂದನೆ:
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಹಿಂದುತ್ವದ ಆಧಾರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 20ದಿನಗಳ ಪ್ರಚಾರಕಾರ್ಯದಲ್ಲಿ 62458 ಮತಗಳನ್ನು ಪಡೆದು ವಿರೋಚಿತ ಸೋಲಿನಲ್ಲೂ ಇತಿಹಾಸ ಸೃಷ್ಠಿಸಿದ್ದ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲರವರಿಗೆ ಕಾವು ಪುತ್ತಿಲ ಅಭಿಮಾನಿ ಬಳಗದಿಂದ ಶಾಲು ಹೊದಿಸಿ, ಹಾರ ಹಾಕಿ, ಪೇಟ ತೊಡಿಸಿ, ಸ್ಮರಣಿಕೆ, ಫಲಪುಷ್ಫ ನೀಡಿ ಅಭಿನಂದಿಸಲಾಯಿತು. ಬಳಿಕ ಶ್ರೀ ನಾಗಸಹಿತ ಚಾಮುಂಡೇಶ್ವರಿ ಕ್ಷೇತ್ರ ಮಾಣಿಯಡ್ಕ ಇವರಿಂದ ಅಭಿನಂದನೆ ಸಲ್ಲಿಸಲಾಯಿತು. ನಂತರ ಮಾಡ್ನೂರು ಗ್ರಾಮದ 5 ಬೂತ್‌ಗಳ ಪ್ರಮುಖರಿಂದ ಮತ್ತು ಸುಮಾರು 50ಕ್ಕೂ ಆಧಿಕ ಕಾರ್ಯಕರ್ತರು ವೇದಿಕೆಗೆ ಬಂದು ಪುತ್ತಿಲರವರಿಗೆ ಕೇಸರಿ ಶಾಲು ಹಾಕಿ ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿದ ಅರುಣ್ ಕುಮಾರ್ ಪುತ್ತಿಲರವರು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ಅರುಣ್ ಕುಮಾರ್ ಪುತ್ತಿಲ ಪರ ಚುನಾವಣಾ ಪ್ರಚಾರಕರಾಗಿದ್ದ ಸುನೀಲ್ ಬೋರ್ಕರ್‌ರವರು ಪ್ರಸ್ತಾವನೆಗೈದರು. ಪುತ್ತಿಲ ಅಭಿಮಾನಿ ಬಳಗದ ಚಿದಾನಂದ ಆಚಾರ್ಯ ಸಸ್ಪೆಟ್ಟಿ ಸ್ವಾಗತಿಸಿ, ಸೋಮಶೇಖರ ನಾಯಕ್ ಮೇಲ್ಪಾದೆ ವಂದಿಸಿದರು. ಚಂದ್ರಕಿರಣ್ ಕಾವು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸುಮಾರು 400ಕ್ಕೂ ಅಧಿಕ ಪುತ್ತಿಲ ಅಭಿಮಾನಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here