ರೆನಾಲ್ಟ್‌ ಕಾರುಗಳ ಎಕ್ಸ್ಚೇಂಜ್ ಮೇಳ …

0

ಬ್ಯಾಂಕ್ ಆಫ್ ಬರೋಡಾ ವತಿಯಿಂದ ತ್ವರಿತ ಲೋನ್ ಸೇವೆ -ವಿದ್ಯಾಧರ್ ಶೆಟ್ಟಿ

ಪುತ್ತೂರು : ರೆನಾಲ್ಟ್‌ ಇದರ ವತಿಯಿಂದ ಪ್ರಾರಂಭಗೊಂಡಿರುವ ಎರಡು ದಿನಗಳ ಮೆಗಾ ವಿನಿಮಯ ಮೇಳವನ್ನು ದರ್ಬೆ ರೈ ಕಮರ್ಷಿಯಲ್ ಕಾಂಪ್ಲೆಕ್ಸ್ ಇಲ್ಲಿ ಕಾರ್ಯಚರಿಸುತ್ತಿರುವ ಬ್ಯಾಂಕ್ ಆಫ್‌ ಬರೋಡಾದ ಪ್ರಾದೇಶಿಕ ಕಛೇರಿಯ ಡಿ.ಆರ್.ಎಂ. ವಿದ್ಯಾಧರ್ ಶೆಟ್ಟಿ ದೀಪ ಪ್ರಜ್ವಲಿಸಿ ವಿನಿಮಯ ಮೇಳಕ್ಕೆ ಮೇ.19 ರಂದು ಚಾಲನೆ ನೀಡಿದರು.


ಬಳಿಕ ಮಾತನಾಡಿದ ಅವರು , ಅತೀ ಹೆಚ್ಚು ವಾಹನ ಸಾಲವನ್ನು ,ಕಡಿಮೆ ಬಡ್ಡಿಯೊಡನೆ ನೀಡುವಲ್ಲಿ ಬ್ಯಾಂಕ್ ಆಫ್ ಬರೋಡ ಬಹಳ ಮುತುರ್ವಜಿ ವಹಿಸಿದೆ.
ಇದೀಗ ರೆನಾಲ್ಟ್‌ ಜತೆಗೆ ಲೋನ್ ಮೇಳ ಹಮ್ಮಿಕೊಂಡಿದ್ದೇವೆ. ಗ್ರಾಹಕರ ಅನುಕೂಲಕ್ಕಾಗಿ ಪ್ರಾದೇಶಿಕ ಕಛೇರಿ ಕೂಡಾ ಪುತ್ತೂರಿನಲ್ಲಿ ಆರಂಭಗೊಂಡಿದ್ದು ,ಇದೀಗ ಲೋನ್ ವ್ಯವಸ್ಥೆ ಒಂದೆರಡು ದಿನಗಳಲ್ಲೇ 8.9% ಬಡ್ಡಿ ದರದಲ್ಲಿ ಸಿಗಲಿದ್ದು, ಜನತೆಯ ಸೇವೆಗೆ ಸದಾ ಸಿದ್ಧ. ಜನತೆ ಇದರ ಪ್ರಯೋಜನ ಪಡೆಯುವಂತೆ ವಿನಂತಿಸಿ ,ಹಾರೈಸಿದರು.

ಸಂಸ್ಥೆಯ ಪ್ರತಿನಿಧಿ ವಿಶಾಲ್ ಮಾತನಾಡಿ , ಮಂಗಳೂರಿನ ಎನಾಕ್ ರೆನಾಲ್ಟ್ ಇದರ ಸಹಸಂಸ್ಥೆ ದರ್ಬೆ ಬೈಪಾಸ್ ಬಳಿಯ ಗುರುಪ್ರಸಾದ್ ಸಂಕೀರ್ಣ ದಲ್ಲಿ ಕಾರ್ಯಾಚರಿಸುತ್ತಿರುವ ರೆನಾಲ್ಟ್‌ ಪುತ್ತೂರು’ ವತಿಯಿಂದ ಕಾರು ಪ್ರಿಯರಿಗೊಸ್ಕರ ಅಯೋಜಿಸಿರುವ ಮೇ.19 ಮತ್ತು 20 ಎರಡು ದಿನಗಳ ಬೃಹತ್ ಮೆಗಾ ಎಕ್ಸ್ಚೇಂಜ್ ಮೇಳ ಇದೀಗ , ಶೋ ರೂಂ ಮುಂಭಾಗದಲ್ಲಿ ಅಯೋಜಿಸಲಾಗಿದ್ದು , ನೂರರಷ್ಟೂ ಸಾಲ ಸೌಲಭ್ಯ ವ್ಯವಸ್ಥೆ ಕಲ್ಪಿಸಿದೆ.ಇಷ್ಟಲ್ಲದೆ ಕಾರು ಪ್ರೀಯರು ಈ ವಿನಿಮಯ ಮೇಳ ಮೂಲಕ ವಿನೂತನ ರೆನಾಲ್ಟ್‌ ಕಾರುಗಳೊಡನೆ ತಮ್ಮ ಹಳೇಯ ಮಾದರಿ ಕಾರುಗಳನ್ನು ಅತ್ಯುತ್ತಮ ಬೆಲೆಯೊಂದಿಗೆ ,ಸುಲಭ ,ಸರಳ ಫೈನಾನ್ಸ್ ಹಾಗೂ ಅತೀ ಕಡಿಮೆ ಬಡ್ಡಿ ದರದೊಂದಿಗೆ ಖರೀದಿ ಮಾಡಬಹುದು. ಪ್ರತಿ ಮಾದರಿ ಕಾರಿನಲ್ಲೂ ಕೂಡ ಉಳಿತಾಯವಕಾಶವಿದ್ದು , ಗ್ರಾಹಕರು ಈ ಮೇಳದ ಪ್ರಯೋಜನ ಪಡೆಯುವಂತೆ ಹೇಳಿ ,ಸಹಕಾರ ಯಾಚಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡಾದ ಅಟೋ ಲೋನ್ ಆಫೀಸರ್ ವೆಂಕಟ್ ಹಾಗೂ ರೆನಾಲ್ಟ್‌ ಸಂಸ್ಥೆಯ ವಿಶಾಲ್ ,ಆಶಿಕ್ ,ಚರಿತ್ರ ಹಾಗೂ ಮಮತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here