ಪುತ್ತೂರು : ಸಂಘಟನೆಯ ಕೆಲಸ ದೇವರ ಕೆಲಸ, ಮಹಾಲಿಂಗೇಶ್ವರ ದೇವರಿಗೆ ಸಮರ್ಪಣೆಯಾಗುವ ಸೇವೆ. ಸೇರಿರುವ ಅಸಂಖ್ಯ ಜನರಲ್ಲೂ ಮಹಾಲಿಂಗೇಶ್ವರ ದೇವರ ಸಾನಿಧ್ಯ ಕಾಣುತ್ತಿದೆ ಎಂದು ಶ್ರೀಕೃಷ್ಣ ಉಪಾಧ್ಯಾಯ ಹೇಳಿದ್ದಾರೆ. ಸೇವಾ ಸಮರ್ಪಣಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ ಕಾಲ್ನಡಿಗೆ ಜಾಥಾದ ಬಳಿಕ ದೇವಳದ ಮುಂಭಾಗದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಮತದಾರರೇ ಹಣ ನೀಡಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದು ವಿಚಿತ್ರ ಘಟನೆ.
ಸಂಘಟನೆಯ ಕೆಲಸ ಮಾಡುವುದು ಹೆಸರಿಗಾಗಿ, ದುಡ್ಡಿಗಾಗಿ ಅಲ್ಲ, ದೇವರಿಗೆ ಎಂದಾದಾಗ ಮಾತ್ರ ಬೆಲೆ.
ಇದು ಚುನಾವಣೆಗಾಗಿ ನಡೆಯುವ ಕಾರ್ಯಕ್ರಮ ಅಲ್ಲ ಎಂದ ಅವರು ಇಂದು ಮಾಣಿ ಮಠದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಪುತ್ತಿಲ ಅವರ ಮುಖಾಮುಖಿಗೆ ಸಂಬoಧಿಸಿದಂತೆ
ಬೈದವರಿಗೂ ಪಾದ ಮುಟ್ಟಿ ನಮಸ್ಕರಿಸುವ ಸಂಸ್ಕೃತಿಗೆ ಸೇರಿದವರು ನಾವು.
ಅವಮಾನ ಮಾಡಿದವರಿಗೂ ಗುರುತಿಸಿ ಗೌರವಿಸುವ ಹಿಂದೂ ಸಭ್ಯತೆಗೆ ಸೇರಿದವರು ನಾವು ಎಂದು ಹೇಳಿದರು.
ಪುತ್ತಿಲ ಪರಿವಾರವು ಸೇವಾ ಕಾರ್ಯಕ್ರಮ ಸೇವಾ ಚಟುವಟಿಕೆಗಳನ್ನು ನಿರಂತರ ಮಾಡಿಕೊಂಡು ಬರಲಿದೆ.
ಯಾರನ್ನೂ ದ್ವೇಷ ಮಾಡದೆ ಸಮಾಜ ಕಟ್ಟುವ ಕೆಲಸ ಮಾಡೋಣ. ಸಂಘಟನೆಯನ್ನು ಕಟ್ಟಿ ಉತ್ತರ ನೀಡೋಣ ಎಂದು ಹೇಳಿದರು.
Home ಇತ್ತೀಚಿನ ಸುದ್ದಿಗಳು ನಾವು ಬೈದವರಿಗೂ ಪಾದ ಮುಟ್ಟಿ ನಮಸ್ಕರಿಸುವ ಸಂಸ್ಕೃತಿಗೆ ಸೇರಿದವರು – ಶ್ರೀ ಕೃಷ್ಣ ಉಪಾಧ್ಯಾಯ