ಕಾರ್ಯಕರ್ತರೊಂದಿಗೆ ಶ್ರೀ ಮಹಾಲಿಂಗೇಶ್ವರನ ದರ್ಶನ ಪಡೆದ ಅರುಣ್‌ ಕುಮಾರ್‌ ಪುತ್ತಿಲ

0

ಪುತ್ತೂರು: ಮತದಾರರಿಗೆ ಕೃತಜ್ಙತೆ ಮತ್ತು ಚುನಾವಣೆ ಸಂದರ್ಭದಲ್ಲಿ ಶಕ್ತಿ ನೀಡಿದ ದೇವರಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ಆಯೋಜಿಸಲಾದ “ನಮ್ಮ ನಡಿಗೆ ಮಹಲಿಂಗೇಶ್ವರನ ನಡೆಗೆ” ಆರಂಭ ದೊರಕಿದೆ. ದರ್ಬೆಯಲ್ಲಿ ಅಶ್ವಥ ಕಟ್ಟೆಗೆ ನಮಸ್ಕರಿಸಿದ ಅರುಣ್ ಪುತ್ತಿಲರವರು ‘ಪುತ್ತೂರು ಮಹಾಲಿಂಗೇಶ್ವರ ದೇವರಿಗೆ ಗೋವಿಂದಾ’ ಹಾಕುವುದರ ಮೂಲಕ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು.

ಪಾದಯಾತ್ರೆ ವೇಳೆ ಭಜನೆ, ʼಓಂ ನಮಃ ಶಿವಾಯ ಮಂತ್ರಕ್ಕಷ್ಟೆ ಅವಕಾಶ ನೀಡಲಾಗಿದ್ದು ದರ್ಬೆಯಿಂದ ಮಹಾಲಿಂಗೇಶ್ವರನ ಸನ್ನಿಧಿಯವರೆಗು ಪುತ್ತಿಲ ಮತ್ತು ಕಾರ್ಯಕರ್ತರನೇಕರು ಬರಿಗಾಲಲ್ಲಿ ಹೆಜ್ಜೆ ಹಾಕಿದರು. ದೇವಸ್ಥಾನಕ್ಕೆ ತಲುಪಿ ಶ್ರೀ ಮಹಾಲಿಂಗೇಶ್ವರ ದರ್ಶನ ಪಡೆದರು.ನಂತರದಲ್ಲಿ 108 ತೆಂಗಿನಕಾಯಿ ಒಡೆಯಲಾಯಿತು. ಈ ಸಂದರ್ಭದಲ್ಲಿ ಅನೇಕ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here