ಪುತ್ತೂರು: ವಿಶ್ವ ರಕ್ತದೊತ್ತಡ ದಿನ ಹಾಗೂ ವಿಶ್ವ ಥೈರಾಯಿಡ್ ದಿನದ ಅಂಗವಾಗಿ ಮೇ೨೭ರಂದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಹೋಮಿಯೋಪತಿ ಶಿಬಿರ ನಡೆಯಲಿದೆ.
ಪ್ರತಿ ವರ್ಷ ಮೇ.17 ರಂದು ವಿಶ್ವ ರಕ್ತದೊತ್ತಡ ದಿನ ಹಾಗೂ ಮೇ.25 ಅನ್ನು ವಿಶ್ವ ಥೈರಾಯಿಡ್ ದಿನವಾಗಿ ಜಾಗತಿಕವಾಗಿ ಆಚರಿಸಲಾಗುತ್ತದೆ. ಥೈರಾಯಿಡ್ ಸಂಬಂಧಿತ ರೋಗದ ಲಕ್ಷಣಗಳು ಹಾಗೂ ಅಧಿಕ ರಕ್ತದೊತ್ತಡ ಕೂಡ ಇಂದಿನ ಜೀವನಶೈಲಿಯಲ್ಲಿ ಕಂಡುಬರುವ ಸಾಮಾನ್ಯ ಕಾಯಿಲೆಯಾಗಿದ್ದು ಇದರ ಪರೀಕ್ಷೆ ಜೊತೆಗೆ ಹೋಮಿಯೋಪತಿ ಚಿಕಿತ್ಸೆ ಬಗ್ಗೆ ಅರಿವು ಮೂಡಿಸುವುದು ಈ ಶಿಬಿರದ ಮುಖ್ಯ ಉದ್ದೇಶ. ಥೈರಾಯ್ಡ್ ಸಮಸ್ಯೆಗಳಿಗೆ ಹಾಗೂ ಅಧಿಕ ರಕ್ತದೊತ್ತಡಕ್ಕೆ ಹೋಮಿಯೋಪತಿಯಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲದ ಉತ್ತಮ ಉಪಚಾರವಿದ್ದು ಮೇ೨೭ರಂದು ನೋಂದಾಯಿತ ರೋಗಿಗಳಿಗೆ ಉಚಿತ ಸಲಹೆ ಹಾಗೂ ಕಡಿಮೆ ವೆಚ್ಚದಲ್ಲಿ ಅಗತ್ಯ ಹೋಮಿಯೋಪತಿ ಔಷಧೋಪಾಚರವನ್ನು ಕೂಡ ನೀಡಲಾಗುವುದು, ರೋಗಿಗಳು ಈ ಶಿಬಿರದ ಲಾಭವನ್ನು ಪಡೆದುಕೊಳ್ಳಬಹುದು.
ಮುಂಗಡ ಕಾಯ್ದಿರಿಸಿದವರಿಗೆ ಮಾತ್ರ ಪ್ರಾಶಸ್ತ್ಯ. ಮುಂಗಡ ಕಾಯ್ದಿರಿಸಲು 8123870254 ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.