ಪುತ್ತೂರು: ಬಲ್ನಾಡು ಗ್ರಾಮದ ಬೆಳಿಯೂರುಗುತ್ತು ಕುಟುಂಬದ ಯಜಮಾನ, ಪ್ರಗತಿಪರ ಕೃಷಿಕ ಬಾಲಕೃಷ್ಣ ರೈ ಇಟ್ರಾಡಿ(91ವ)ರವರು ಪುತ್ತೂರಿನ ಸಾಮೆತಡ್ಕದ ಪುತ್ರನ ಮನೆಯಲ್ಲಿ ಮೇ 25 ರಂದು ನಿಧನರಾದರು.
ಮೃತರ ಅಂತ್ಯಸಂಸ್ಕಾರವು ಬೆಳ್ಳಾರೆ ಸಮೀಪದ ಕೊಡಿಯಾಲ ಗ್ರಾಮದ ಕುರಿಯಾಜೆಯಲ್ಲಿ ನೇರವೇರಿತು. ಬಾಲಕೃಷ್ಣ ರೈಯವರು ಕೊಡಿಯಾಲ ಗ್ರಾ.ಪಂ, ನಲ್ಲಿ 25 ವರ್ಷಗಳ ಕಾಲ ಅಧ್ಯಕ್ಷರಾಗಿ, ಕೊಡಿಯಾಲ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 10 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಇವರು ಬಂಟ ಸಮಾಜದ ಮದುವೆ ಕಾರ್ಯಕ್ರಮದ ಸುಧಾರಿಕೆಯನ್ನು ಪುತ್ತೂರು-ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ನಡೆಸಿಕೊಡುವ ಮೂಲಕ ಹೆಸರನ್ನು ಪಡೆದಿದ್ದರು.
ಮೃತರು ಸಹೋದರ ವಿಜಯಾ ಬ್ಯಾಂಕ್ನ ನಿವೃತ್ತ ಡೆಪ್ಯೂಟಿ ಜನರಲ್ ಮೆನೇಜರ್ ದೇರಣ್ಣ ರೈ, ಸಹೋದರಿ ಸಾವಿತ್ರಿ ರೈ, ಪತ್ನಿ ಶೀಲಾವತಿ ಬಿ.ರೈ, ಪುತ್ರರಾದ ಪ್ರಗತಿಪರ ಕೃಷಿಕರಾದ ಜೀವನ್ದಾಸ್ ರೈ, ನವೀನ್ ಕುಮಾರ್ರೈ, ಅರುಣ್ಕುಮಾರ್ ರೈ, ಪುತ್ತೂರು ಎಲ್ಐಸಿ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್ ರೈ, ಪುತ್ರಿ ಸುಮ ಪ್ರಕಾಶ್ ಶೆಟ್ಟಿ, ಸೊಸೆಯಂದಿರುಗಳಾದ ಲೀಲಾವತಿ ರೈ, ಶಶಿಕಲಾ ರೈ, ಪ್ರಶಾಂತಿ ರೈ, ಪವಿತ್ರ ರೈ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಹಕಾರ ಕ್ಷೇತ್ರದ ಧುರಿಣರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಬೇಟಿ ನೀಡಿದರು.