ಪುತ್ತೂರು: ಒಳ್ಳೆಯ ಮೌಲ್ಯಾಧಾರಿತ ಶಿಕ್ಷಣ ಕೊಡುವ ಶಕ್ತಿ ಎಲ್ಲರಿಗೂ ಇದೆ. ಬಡವರ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕೆಂಬುದು ನನ್ನ ಉದ್ದೇಶ ಎಂದು ನೂತನ ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಪುತ್ತೂರು ಸಂತ ಪಿಲೋಮಿನಾ ಪ್ರೌಢಶಾಲೆ ಸಭಾಂಗಣದಲ್ಲಿ ಮೇ 25 ರಂದು ನಡೆದ ಶಾಲಾ ಶೈಕ್ಷಣಿಕ ಆರಂಭದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದ ಅವರು 3 ಮೋಡರ್ನ್ ಶಾಲೆ ಪುತ್ತೂರಿನಲ್ಲಿ ಆರಂಭಿಸಲಾಗುವುದು. ನನ್ನ ತಂದೆ ಅಧ್ಯಾಪಕರಾಗಿದ್ದು ನನ್ನ ಪ್ರಥಮ ಮೀಟಿಂಗ್ ಕೂಡ ಶಿಕ್ಷಣಕ್ಕೆ ಸಂಬಂಧಿಸಿದ್ದಾಗಿದೆ.ರಾಜಕೀಯ ರಹಿತ ಎಸ್ ಡಿ ಎಂ ಸಿ ರಚಿಸುವಂತೆ, ಸ್ವಚ್ಚತೆ ಕುರಿತು ಆದ್ಯತೆ ನೀಡುವಂತೆ,ಅಕ್ಷರ ದಾಸೋಹದಲ್ಲಿ ಸ್ವಚ್ಚತೆ ಕಾಪಾಡುವಂತೆ ಕರೆ ನೀಡಿದ ಅವರು ರಜೆ ಮುಗಿದಾಗ ಶಾಲಾ ಮಕ್ಕಳಿಗೆ ಧೈರ್ಯ ತುಂಬಿ ಎಂದು ಮನವಿ ಮಾಡಿದರು.
ಆರಂಭದಲ್ಲಿ ಶಿಕ್ಷಕರೊಂದಿಗೆ ಸಂವಾದ ನಡೆಸಿದ ಶಾಸಕರು ಮಕ್ಕಳ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಆಲಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಸ್ವಾಗತಿಸಿ ಇಲಾಖೆ ವತಿಯಿಂದ ನೂತನ ಶಾಸಕರನ್ನು ಗೌರವಿಸಿದರು. ಇದೆ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲೆಯ ಶಿಕ್ಷಕರ ಸಂಘದಿಂದ ಶಾಸಕರನ್ನು ಗೌರವಿಸಲಾಯಿತು. ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಸಹಿತ ಶಿಕ್ಷಣ ಸಂಯೋಜಕರಾದ ನವೀನ್ ವೇಗಸ್, ಹರಿಪ್ರಸಾದ್, ಅಕ್ಷರದಾಸೋಹ ಸಹಾಯನಿರ್ದೇಶಕ ವಿಷ್ಣುಪ್ರಸಾದ್, ವಿಮಲ್ ಕುಮಾರ್, ಸಂತಪಿಲೋಮಿನಾ ಪ್ರೌಢಶಾಲೆಯ ಮುಖ್ಯಗುರು ಕಾರ್ಮಿಲ್, ನವೀನ್ ರೈ , ಸಭೆಯಲ್ಲಿ ವಿವಿಧ ಶಾಲೆಯ ಮುಖ್ಯ ಶಿಕ್ಷಕರುಗಳು ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ವಂದಿಸಿ, ಅಮೃತಕಲಾ ಕಾರ್ಯಕ್ರಮ ನಿರೂಪಿಸಿದರು.