ಪುತ್ತೂರು: ಅಶೋಕ ಜನಮನ 2025ರ ವಸ್ತ್ರ ವಿತರಣಾ ಕಾರ್ಯಕ್ರಮದ ಜನಸಂಪರ್ಕ ಸಭೆಯು ಆರ್ಯಾಪು ವಲಯದ ಮರಿಕೆ ವಠಾರದಲ್ಲಿ ಅ.6ರಂದು ನಡೆಯಿತು. ಉಸ್ತುವಾರಿಯಾದ ಮಹಾಬಲ ರೈ ವಳತಡ್ಕ ಹಾಗೂ ಗಿರೀಶ್ ರೈ ಕೈಕಾರ ಮತ್ತು ಬಾಬು ಮರಿಕೆ ಇವರ ಜವಾಬ್ದಾರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷರಾದ ಸದಾನಂದ ಶೆಟ್ಟಿ ಕೂರೇಲು ಸದಸ್ಯರಾದ ಪ್ರಜ್ವಲ್ ರೈ ತೊಟ್ಲ, ಚೆನ್ನಪ್ಪ ಮರಿಕೆ ಮಾಜಿ ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಚೆನ್ನಪ್ಪ ಮರಿಕೆ, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಶೀನಪ್ಪ ಮರಿಕೆ ಬೂತು ಅಧ್ಯಕ್ಷರಾದ ಸುಹೇಲ್ ಸಂಟ್ಯಾರು ಮಾಜಿ ಎಪಿಎಂಸಿ ಸದಸ್ಯರಾದ ಗುರುವಪ್ಪ ಮರಿಕೆ ಕಲಾಂ ಸಂಟ್ಯಾರು ವಲೇರಿಯನ್ ಡಿಸೋಜಾ ,ವಿನ್ಸೆಂಟ್ , ರವಿ ಡಿಸೋಜ , ರಾಮು ಟಿ ಸಂಟ್ಯಾರು ,ಗಣೇಶ್ ಕಾಯರಪು ,ಮಹೇಶ್ ಮರಿಕೆ , ಪುತ್ತೂರು ಮಹಿಳಾ ಕಾಂಗ್ರೆಸ್ನ ಜೊತೆ ಕಾರ್ಯದರ್ಶಿಯಾದ ಪವಿತ್ರ ಬಾಬು ಮರಿಕೆ, ಗಣೇಶ, ಹೇಮ, ಲಲಿತ, ಸುಂದರಿ, ಬೇಬಿ, ಶೋಭಾ, ಬೇಬಿ ಮಿತ್ತಡ್ಕ, ಕುಸುಮ ಮಿತ್ತಡ್ಕ, ಮಮತಾ ,ಮೋಹನ ಪೂಜಾರಿ, ಸುಂದರ, ಬಾಬು, ಕೃಷ್ಣಪ್ಪ, ಆನಂದ, ಕುಸುಮ, ತಿಮ್ಮಪ್ಪ, ರೋಹಿಣಿ, ಜನಾರ್ಧನ, ಗೀತಾ ಸಂಟ್ಯಾರು, ರೇವತಿ ಸೆಂಟ್ಯಾರು, ಭವ್ಯ, ಸುಶಾನ್, ಹಿರಿಯರಾದ ಚೆನ್ನಪ್ಪ ಮರಿಕೆಯವರ ತಾಯಿ ಹಾಗೂ ಶಾಸಕರ ಹಿತೈಷಿಗಳು ಉಪಸ್ಥಿತರಿದ್ದರು.
ಪೂಜಾ ಮತ್ತು ಸಾನ್ವಿ ಮರಿಕೆ ಪ್ರಾರ್ಥಿಸಿದರು. ಬಾಬು ಮರಿಕೆ ಸ್ವಾಗತಿಸಿ ವಂದಿಸಿದರು. ಗಣೇಶ್ ಕಾಯರಪು ಮತ್ತು ಬಾಬು ಮರಿಕೆ ಸಹಕರಿಸಿದರು.