ಸದಸ್ಯ ರಾಜೇಶ್ ಬಿ.ರವರ ಮನೆ ನಿರ್ಮಾಣಕ್ಕೆ ರೂ.25 ಸಾವಿರ ಧನಸಹಾಯ
ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ಸ್ಥಾಪನಾ ದಿನಾಚರಣೆಯು ಮೇ.30ರಂದು ಮದ್ಲ ಸಂಸ್ಕೃತಿ ಸಭಾಭವನದಲ್ಲಿ ನಡೆಯಿತು.
ಸ್ಥಾಪನಾ ದಿನಾಚರಣೆಯ ಬಗ್ಗೆ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರು ಮಾತನಾಡಿ 2011ರಲ್ಲಿ ಆರಂಭಗೊಂಡ ಸಂಘಟನೆಯು 12 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 13ನೇ ವರ್ಷಕ್ಕೆ ಕಾಲಿಟ್ಟಿದೆ, ತನ್ನ 12 ವರ್ಷದಲ್ಲಿ ಸಮಾಜದಲ್ಲಿ ಸಾಕಷ್ಟು ಕೆಲಸಗಳು, ಸೇವೆಗಳು, ಸಾಧನೆಗಳು, ಕೊಡುಗೆಗಳನ್ನು ನೀಡಿ ಜಿಲ್ಲಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದೇವೆ, ಪ್ರಮುಖವಾಗಿ ಯುವಕ ಮಂಡಲವು ಕಳೆದ 12 ವರ್ಷದಲ್ಲಿ ಅನೇಕ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದೆ, ಅನೇಕ ಯುವ ಪ್ರತಿಭೆಗಳಿಗೆ ವೇದಿಕೆಯಾಗಿದೆ, ಆ ಮೂಲಕ ಯುವಕರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು, ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗಿದೆ, ಹಾಗಾಗಿ ತುಡರ್ ಸಂಘಟನೆಯು ಯುವಕರ ಪಾಲಿನ ದಾರಿದೀಪವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.
ಯುವಕ ಮಂಡಲದ ಅಧ್ಯಕ್ಷ ಜಗದೀಶ ನಾಯ್ಕ ಆಚಾರಿಮೂಲೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ನನ್ಯ, ಉಪಾಧ್ಯಕ್ಷ ಶ್ರೀಕುಮಾರ್ ಬಲ್ಯಾಯ, ಸಂಘಟನಾ ಕಾರ್ಯದರ್ಶಿ ರಾಮಣ್ಣ ನಾಯ್ಕ ಆಚಾರಿಮೂಲೆ ಉಪಸ್ಥಿತರಿದ್ದರು. ಸದಸ್ಯರಾದ ಹರ್ಷಿತ್ ಎ.ಆರ್ ಸ್ವಾಗತಿಸಿ, ನಿರಂಜನ ರಾವ್ ಕಮಲಡ್ಕ ವಂದಿಸಿದರು.
ಆರ್ಥಿಕ ಸಹಾಯ:
ತುಡರ್ ಸ್ಥಾಪನಾ ದಿನದ ಅಂಗವಾಗಿ ಯುವಕ ಮಂಡಲದ ಸಕ್ರಿಯ ಹಿರಿಯ ಸದಸ್ಯ, ಕಾವುನಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿರುವ, ವಿಶೇಷ ಚೇತನ ಆಗಿರುವ ರಾಜೇಶ್ ಬಿ.ರವರ ಮನೆ ನಿರ್ಮಾಣದ ಕೆಲಸಕ್ಕೆ ಸಂಘದಿಂದ ರೂ.25 ಸಾವಿರ ಆರ್ಥಿಕ ಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಭಜನಾ ಸಂಘದ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ, ಕಾರ್ಯದರ್ಶಿ ಲಿಂಗಪ್ಪ ನಾಯ್ಕ ನನ್ಯ, ಯುವಕ ಮಂಡಲದ ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ, ಸದಸ್ಯರಾದ ಬಾಲಕೃಷ್ಣ ಪಾಟಾಳಿ, ಭವಿತ್ ರೈ, ರಾಜೇಶ್ ಬಿ, ರಾಘವ ಪಿ.ಎಸ್ ರವರು ಪಾಲ್ಗೊಂಡಿದ್ದರು.