





ಪುತ್ತೂರು : ಕೇರಳದಲ್ಲಿ ಸಹೋದರನ ಹತ್ಯೆ ಮಾಡಿ ಪುತ್ತೂರಿನಲ್ಲಿ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಪುತ್ತೂರಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕೇರಳ ಪೊಲೀಸರು ಪುತ್ತೂರು ನಗರ ಪೊಲೀಸರ ಸಹಕಾರದಿಂದ ಆರೋಪಿಯನ್ನು ಕೊಂಬೆಟ್ಟು ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿ ದೇವಸ್ಥಾನದ ಬಳಿಯ ಚರಂಡಿಗೆ ಹಾರಿ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಪುತ್ತೂರು ನಗರ ಮತ್ತು ಕೇರಳ ಪೊಲೀಸರು ವಿಫಲಗೊಳಿಸಿ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.



ಸಹೋದರರ ನಡುವಿನ ವೈಷಮ್ಯದ ಕಾರಣ ಕಳೆದ ಶನಿವಾರ ಬೆಳಗ್ಗೆ ಕಾಸರಗೋಡಿನ ಪೈವಳಿಕೆಯಲ್ಲಿ ಅಣ್ಣ ಜಯರಾಮ ನೋಂಡ ತನ್ನ ತಮ್ಮ ಪ್ರಭಾಕರ ನೋಂಡ (40) ಎಂಬವರನ್ನು ಇರಿದು ಕೊಲೆ ಮಾಡಿ ಪುತ್ತೂರಿನಲ್ಲಿ ತಲೆಮರಿಸಿಕೊಂಡಿದ್ದ.












