ಮೂರು ದಿನಗಳ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 23ನೇ ವರ್ಷದ ಗಣೇಶೋತ್ಸವವು ವಿಜೃಂಭಣೆಯಿಂದ ಆಚರಣೆ
ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪುರುಷರಕಟ್ಟೆ ಇದರ 23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಭಾವಿ ಸಭೆಯ ಸಮಿತ ಅಧ್ಯಕ್ಷ ವಿಶ್ವನಾಥ ಪುರುಷ ಸುರುಳಿಮಜಲು ಪುರುಷರಕಟ್ಟೆ ಇವರ ಅದ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಗತ ವರ್ಷದ ಗಣೇಶೋತ್ಸವ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಲಾಯಿತು. ಈ ವರ್ಷದ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು ಈ ಭಾರಿಯೂ ಎಂದಿನಂತೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಸುವುದಾಗಿ ಸಭೆಯಲ್ಲಿ ತೀರ್ಮಾಣಿಸಲಾಯಿತು.
ಅಧ್ಯಕ್ಷ ವಿಶ್ವನಾಥ ಪುರುಷ ಮಾತನಾಡಿ, ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ವಿವರಿಸಿದರು.
ಕಾರ್ಯದರ್ಶಿ ಹರೀಶ್ ದೇವಾಡಿಗ ವರದಿ ವಾಚಿಸಿದರು. ಖಜಾಂಚಿ ಕೃಷ್ಣಪ್ಪ ಶೆಟ್ಟಿ ಮಜಲು ಸ್ವಾಗತಿಸಿದರು.
ಸಮಿತಿಯ ಮಾಜಿ ಅಧ್ಯಕ್ಷ ಶರತ್ ಬೈಪಾಡಿತ್ತಾಯ, ಉಮೇಶ್ ಇಂದಿರಾನಗರ, ಪ್ರಮುಖರಾದ ಪ್ರಕಾಶ್ ಪುರುಷರಕಟ್ಟೆ
ಬೇಬಿ ಜಾನ್ ಕೂಡುರಸ್ತೆ , ಸದಸ್ಯರಾದ ಚಿದಾನಂದ ಸುರುಳಿಮಜಲು ಲಕ್ಷ್ಮೀಶ್ ಭಂಡಾರಿ, ರೋಹಿತ್ ಶಿಬರ, ದಿನೇಶ್ ಇಂದಿರಾನಗರ, ಸುರೇಶ್ ಕೊಡಿ ಮಮಜಲು, ಸುಬ್ರಮಣ್ಯ ಪೂಜಾರಿ ಪುರುಷರಕಟ್ಟೆ, ಕಾರ್ತಿಕ್ ಪೂಜಾರಿ, ಚಂದ್ರಕಾಂತ ಜೋಗಿ , ರಘುನಾಥ್ ಮಣಿಯ, ಆನಂದ ಕೊಡಿಮಜಲು, ರವಿ ಮಾಯಾಂಗಲ, ರವಿ ಕೊಡಿಮಜಲು, ಸತೀಶ್ ಪಿ, ಸತೀಶ್ ಜೋಗಿ ಇಂದಿರಾನಗರ ಉಪಸ್ಥಿತರಿದ್ದರು.