ವಿಶ್ವ ತಂಬಾಕು ವಿರೋಧಿ ದಿನಾಚರಣೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಆಶ್ರಯದಲ್ಲಿ ಜೂನ್‌.4 ರಂದು ಜನಜಾಗೃತಿ ವೇದಿಕೆಯ ಸಹಯೋಗದೊಂದಿಗೆ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಜಾಗೃತಿ ಕುರಿತಾದ ಮಾಹಿತಿಯನ್ನು ಹಮ್ಮಿಕೊಳ್ಳಲಾಯಿತು.

ದೀಪ ಬೆಳಗುವುದರ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ತಾಲೂಕು ಜನಜಾಗೃತಿ ಅಧ್ಯಕ್ಷರಾದ ಲೊಕೇಶ್‌ ಹೆಗ್ಡೆ ಮಾತನಾಡಿ, ನಮ್ಮ ದೇಶದ ಯುವ ಜನಾಂಗ ದುಶ್ಚಟಕ್ಕೆ ಬಲಿಯಾಗುತ್ತಿದೆ. ಇದರಿಂದ ನಾವು ಮುಕ್ತರಾಗಬೇಕು. ಇದೆಲ್ಲದರ ಅರಿವು ನಮಗಿರಬೇಕು ಎಂದು ಹೇಳಿದರು. ತಾಲೂಕು ಯೋಜನಾಧಿಕಾರಿ ಶಶಿಧರ್‌, ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಪೂಜ್ಯ ಖಾವಂದರ ಆಶಯದಂತೆ ಜನಜಾಗೃತಿ ಉತ್ತಮ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.

ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ, ಸಾಮಾಜಿಕ, ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ದಿ ಕಂಡಿದೆ. ಮಹಿಳಾ ಸಬಲೀಕರಣಕ್ಕೂ ಪ್ರೋತ್ಸಾಹಿಸುತ್ತಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಗಣೇಶ್‌, ಕೆಟ್ಟ ದುಶ್ಚಟಗಳಿಗೆ ಮಕ್ಕಳು ಬೇಗ ಬಲಿಯಾಗುತ್ತಾರೆ. ಚಿಕ್ಕ ಚಿಕ್ಕ ಅಭ್ಯಾಸಗಳಿಂದ ದೊಡ್ಡ ಚಟಗಳಿಗೆ ಮಕ್ಕಳು ಬಲಿಯಾಗುವ ಸಾದ್ಯತೆ ಇದ್ದು ಅವರನ್ನು ತಂದೆ ತಾಯಿಗಳಾದ ನಾವು ಸಂಸ್ಕಾರವಂತರಾಗಿ ಬೆಳೆಸೋಣ ಎಂದರು.

ಮಹಾಬಲ ರೈ ಮಾತನಾಡಿ, ನಾವು ಈ ದಿನ ಇಲ್ಲಿ ಕಲಿತುಕೊಂಡ ಎಲ್ಲಾ ಉತ್ತಮ ವಿಶಯಗಳನ್ನು ಮನದಲ್ಲಿ ಇಟ್ಟುಕೊಂಡು ನಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವುದರ ಮೂಲಕ ಸಾಮಾಜಿಕ ಅಭಿವೃಧ್ಧಿಯತ್ತ ಸಾಗೋಣ ಎಂದರು.

ಒಕ್ಕೂಟ ಅಧ್ಯಕ್ಷರಾದ ಆಹಲ್ಯ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು. ಮಲಯ ಜನಜಾಗೃತಿ ಅಧ್ಯಕ್ಷ ಸತೀಶ್‌ ನಾಯ್ಕ, ಮಲ್ವೀಚಾರಕಿ ಶ್ರುತಿ, ಸೇವಾ ಪ್ರತಿನಿಧಿ ರಜನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here