‘ವಿದ್ಯಾರ್ಥಿ ದಿಶೆಯಿಂದಲೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಅನಂತರವೂ ಅದನ್ನು ಮುಂದುವರಿಸಬೇಕು.- ಶ್ರೀ ವಸಂತಕೋನಡ್ಕ
ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2022-23 ನೇ ಸಾಲಿನ ಹತ್ತನೇ ತರಗತಿ ಮಕ್ಕಳ ಉತ್ತಮ ಫಲಿತಾಂಶ[98%]ದ ಸಾಧನಾಭಿನಂದನಾ ಕಾರ್ಯಕ್ರಮ ನಡೆಯಿತು.
ಅತಿಥಯಾಗಿ ಭಾಗವಹಿಸಿದ ವಸಂತಕೋನಡ್ಕ ‘ನಮ್ಮಲ್ಲಿ ನಾವು ಪ್ರಮುಖವಾಗಿ ಐದು ಗುಣಗಳಾದ ಯೋಚನಾ ಸಾಮರ್ಥ್ಯ, ಯೋಜನಾ ಬದ್ಧತೆ, ಸಾಮಾನ್ಯಜ್ಞಾನ, ಸಮಯ ಪ್ರಜ್ಞೆ, ಸಮಾಜಮುಖಿ ಬದುಕು ಇವುಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕಾಗಿದೆ’ಎಂದರು.
ಇನ್ನೊರ್ವ ಅಭ್ಯಾಗತರಾಗಿ ಆಗಮಿಸಿದ ಪಿ.ಎಸ್ ಪ್ರೊಜೆಕ್ಟ್ ಪುತ್ತೂರು ಇದರ ಮಾಲಕ ಪ್ರತಾಪಸಿಂಹ ವರ್ವ ಪರೀಕ್ಷೆ ಬರೆದ ಎಲ್ಲಾ 98 ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂಧಿಸುವ ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿ ಶುಭ ಹಾರೈಸಿದರು.
ಸಭಾಧ್ಯಕ್ಷ ವಿವೇಕಾನಂದ ವಿದ್ಯವರ್ಧಕ ಸಂಘದ ನಿರ್ದೇಶಕ ವಸಂತ ಮಾಧವ ಮಾತನಾಡಿ ವಿದ್ಯಾರ್ಥಿಗಳಿಗೆ ನೀಡಿದ ಅಭಿನಂದನಾ ಪತ್ರ, ಸಸ್ಯದ ಕೊಡುಗೆ ಮಾಡಿದ ಹೋಮದ ಅಗ್ನಿಯ ಸಾಕ್ಷಿ ಈ ಎಲ್ಲವನ್ನೂ ಅರ್ಥೈಸಿಕೊಂಡಾಗ ಹೆಚ್ಚಿದ ಜವಾಬ್ದಾರಿಯ ಅರ್ಥವಾಗುತ್ತದೆ. ‘ಸತ್ಯಂ ವದಧರ್ಮಂಚರ’ಎಂಬುದನ್ನು ನೆನಪಿಸುತ್ತದೆ.’ಐಕ್ಯೂ’ಜೊತೆಗೆ ಇಕ್ಯೂ(ಭಾವನಾತ್ಮಕ ಕೋಶಂಟ್) ಕೂಡ ಅತಿ ಮುಖ್ಯ. ಮಕ್ಕಳ ದಾರಿ ತಪ್ಪಿಸುವ ವ್ಯಕ್ತಿಗಳ ಪರಿಸರಗಳ ಬಗ್ಗೆ ಮಕ್ಕಳನ್ನು ಎಚ್ಚರಿಸುವ ಕಾರ್ಯವನ್ನುತಾಯಂದಿರು, ಹಿರಿಯರು ಮಾಡುತ್ತಾ ಅವರನ್ನು ದೇಶಾಭಿಮುಖಿ, ಸಮಾಜಾಭಿಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.
ಶಾಲಾ ಸಂಚಾಲಕ ವಸಂತ ಸುವರ್ಣರವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು.ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಮೇಶ್ಚಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆಯವರು ಕಾರ್ಯಕ್ರಮದ ಮಹತ್ವದ ಬಗ್ಗೆ ಮಾತನಾಡಿದರು.
ಶ್ವೇತಾ ಮಾತಾಜಿ ಪ್ರಾರ್ಥಿಸಿ, ರೇಷ್ಮಾ ಕಾರ್ಯಕ್ರಮ ನಿರೂಪಿಸಿ, ಅಶೋಕ್ ಕುಂಬ್ಲೆ ಧನ್ಯವಾದ ಸಲ್ಲಿಸಿದರು.