ಅರಿಯಡ್ಕ: ಯುವ ಜನತೆ ಕೃಷಿಯತ್ತ ಗಮನ ಹರಿಸಿದಾಗ ದೇಶ ಅಭಿವೃದ್ದಿಯತ್ತ ಸಾಗುತ್ತದೆ. ಈ ನಿಟ್ಟಿನಲ್ಲಿ ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಸಂಬಂಧಿಸಿದಂತೆ ವಿವಿಧ ಮಾಹಿತಿಗಳು, ಉದ್ಯೋಗ ಮಾಹಿತಿ, ಪರಿಸರ ಮಾಹಿತಿ, ಶಿಕ್ಷಣಕ್ಕೆ ಉತ್ತೇಜನ, ಹೀಗೆ ಹತ್ತಾರು ಕಾರ್ಯಕ್ರಮಗಳ ಗ್ರಾಮಾಭಿವೃದ್ದಿಯ ಧ್ಯೇಯ ಉದ್ದೇಶ ಇಟ್ಟುಕೊಂಡು ನಿಮ್ಮ ಸೇವೆಗೆ ನಾವು ಸಿದ್ಧ ಎಂಬ ಶೀರ್ಷಿಕೆಯಡಿ ಪ್ರತಿಷ್ಠಾನ ಸಮಾಜ ಸೇವೆ ಮಾಡುತ್ತಿದೆ ಎಂದು ಬ್ಯಾಂಕ್ ಆಫ್ ಬರೋಡ ಮಂಗಳೂರು ಇದರ ಪ್ರಾದೇಶಿಕ ವ್ಯವಸ್ಥಾಪಕ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಅವರು ಅರಿಯಡ್ಕ ಶ್ರೀಕೃಷ್ಣ ಭಜನಾ ಮಂದಿರದ ಸಭಾ ಭವನದಲ್ಲಿ ಜೂ7.ರಂದು ಏರ್ಪಡಿಸಿದ ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ನೇತೃತ್ವದಲ್ಲಿ ಬ್ಯಾಂಕ್ ಆಪ್ ಬರೋಡ ಪ್ರಾಯೋಜಕತ್ವದಲ್ಲಿ ನಿಯೋಜಿತ ಅರಿಯಡ್ಕ ಮತ್ತು ಕೆಯ್ಯೂರು ಗ್ರಾಮೀಣಭಿವೃದ್ದಿ ಸಮಿತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ
ಮಾತಾಡಿದರು.
ವೇದಿಕೆಯಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಬಾಲಸುಬ್ರಹ್ಮಣ್ಯ, ಬ್ಯಾಂಕ್ ಆಪ್ ಬರೋಡ ಕಾವು ಶಾಖೆಯ ವ್ಯವಸ್ಥಾಪಕ ಪಾರಿತೋಷ ಮಂಡಲ್, ಬ್ಯಾಂಕ್ ಆಪ್ ಬರೋಡ ಕುಂಬ್ರ ಶಾಖೆಯ ವ್ಯವಸ್ಥಾಪಕ ಜೆ.ರಾಜಾ, ಬ್ಯಾಂಕ್ ಆಪ್ ಬರೋಡ ಬೆಟ್ಟಂಪಾಡಿ ಶಾಖೆಯ ವ್ಯವಸ್ಥಾಪಕ ಸತೀಶ್, ಬ್ಯಾಂಕ್ ಆಪ್ ಬರೋಡ ಈಶ್ವರಮಂಗಲ ಶಾಖೆಯ ವ್ಯವಸ್ಥಾಪಕ ಅನೂಪ್ ಉಪಸ್ಥಿತರಿದ್ದರು.
ಸಾಲಪತ್ರ ವಿತರಣೆ :
ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಸಾಲಪತ್ರ ವಿತರಣೆ ಮಾಡಲಾಯಿತು.ಸಾಲಗಾರರ ಪಟ್ಟಿಯನ್ನು ಪುತ್ತೂರು ಕೃಷಿ ವಿಭಾಗದ ಮುಖ್ಯಸ್ಥರಾದ ಕಾರ್ತಿಕ್ ಪಿ.ಭಟ್ ವಾಚಿಸಿ ದೇವಿಪ್ರಸಾದ್ ಶೆಟ್ಟಿಯವರು ಸಾಲಪತ್ರ ವಿತರಿಸಿದರು.
ಮಾಹಿತಿ ಕಾರ್ಯಗಾರ:
ಕೃಷಿಯ ಬಗ್ಗೆ ಪುತ್ತೂರು ತೋಟಗಾರಿಕಾ ಸಹಾಯಕ ನಿರ್ದೆಶಕರಾದ ಶಿವಪ್ರಸಾದ್ ಮಾಹಿತಿ ನೀಡಿದರು. ಬ್ಯಾಂಕ್ ನ ಸೌಲಭ್ಯಗಳ ಕುರಿತು ವಿಜಯ ಗ್ರಾಮೀಣ ಪ್ರತಿಷ್ಠಾನ(ರಿ) ಮಂಗಳೂರು ಇದರ ಕಾರ‍್ಯನಿರ್ವಹಣಾಧಿಕಾರಿ ಸಚಿನ್ ಹೆಗ್ಡೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕೃಷಿಕರಿಗೆ ಮಾಹಿತಿ ನೀಡಿದರು.
ಮನವಿ ಸಲ್ಲಿಕೆ:
ನೂತನ ಶ್ರೀಕೃಷ್ಣ ಭಜನಾ ಮಂದಿರದ ಅಭಿವೃದ್ದಿ ಕಾರ್ಯಗಳಿಗೆ ಕೈ ಜೋಡಿಸುವಂತೆ ಶ್ರೀಕೃಷ್ಣ ಭಜನಾ ಮಂದಿರದ ವತಿಯಿಂದ ಅಧ್ಯಕ್ಷ ರಾಮದಾಸ್ ರೈ ಮದ್ಲ, ಖಜಾಂಜಿ ತಿಲಕ್ ರೈ ಕುತ್ಯಾಡಿ, ಜೀರ್ಣೊದ್ದಾರ ಸಮಿತಿ ಕರ‍್ಯದರ್ಶಿ ಹರೀಶ್ ರೈ ಜಾರತ್ತಾರುರವರು ಬ್ಯಾಂಕ್ ಆಪ್ ಬರೋಡಾ ಮಂಗಳೂರು ಇದರ ಪ್ರಾದೇಶಿಕ ವ್ಯವಸ್ಥಾಪಕರಿಗೆ ಮನವಿಯನ್ನು ಸಲ್ಲಿಸಿದರು.
ಆರ್‌ಡಿಪಿ ಮಂಗಳೂರು ಇದರ ಕರ‍್ಯಗಾರಿ ಸಮಿತಿ ಸದಸ್ಯರಾದ ಕಡಮಜಲು ಸುಭಾಸ್ ರೈ ಸಭಾಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಸಂತೋಷ್ ಕುಮಾರ್ ಇಳಂತಾಜೆ, ಇ.ಕೆ ಜಯರಾಮ ರೈ ಕೆಯ್ಯೂರು, ಹರೀಶ್ ರೈ ಜಾರತ್ತಾರು, ವಿಶ್ವನಾಥ ಕೆಂಗುಡೇಲು, ರಾಮದಾಸ ರೈ ಮದ್ಲ, ಚೆನ್ನಪ್ಪ ರೈ ದೇರ್ಲ, ರಾಜೇಶ್ ರೈ ಕುತ್ಯಾಡಿ, ಬಾಲಕೃಷ್ಣ ರೈ ಮಾಡಾವು ಮತ್ತು ನಾರಾಯಣನಾಯ್ಕ ಪೈಲಕಲ್ಲು ಅತಿಥಿಗಳಿಗೆ ಹೂಗುಚ್ಚ ನೀಡಿ ಗೌರವಿಸಿದರು. ಅರಿಯಡ್ಕ ವಿ.ಅರ್.ಡಿ.ಎಫ್ ಗ್ರಾಮ ಸಮಿತಿ ಅಧ್ಯಕ್ಷ ಅಮ್ಮಣ್ಣ ರೈ ಡಿ ಪಾಪೆಮಜಲು ಸ್ವಾಗತಿಸಿ, ಕೆಯ್ಯೂರು ವಿ.ಅರ್.ಡಿ.ಎಫ್ ಗ್ರಾಮ ಸಮಿತಿ ಅಧ್ಯಕ್ಷ ರಮೇಶ್ ರೈ ಬೋಳೊಡಿ ವಂದಿಸಿದರು. ಅರಿಯಡ್ಕ ವಿ.ಅರ್.ಡಿ.ಎಪ್ ಗ್ರಾಮ ಸಮಿತಿ ಪ್ರದಾನ ಕಾರ್ಯದರ್ಶಿ ತಿಲಕ್ ರೈ ಕುತ್ಯಾಡಿ ಕಾರ್ಯಕ್ರಮ ನಿರೂಪಿಸಿದರು.