ನಾಲ್ಕು ವರ್ಷದಿಂದ ಅರ್ಜಿ ಹಾಕುತ್ತಿದ್ದೇನೆ ಸ್ಕೂಟರ್ ಕೊಟ್ಟಿಲ್ಲ-ವಿಕಲಚೇತನ ಯುವಕನಿಂದ ಶಾಸಕರಿಗೆ ದೂರು

0

ಪುತ್ತೂರು: ನನ್ನ ಎರಡು ಕಾಲುಗಳು ಬಲಹೀನವಾಗಿದೆ. ವಿಕಲಚೇತನರಿಗೆ ಅಥವಾ ನಡೆದಾಡಲು ಸಾಧ್ಯವಾಗದ ಚೇತನರಿಗೆ ಸರಕಾರದಿಂದ ನಾಲ್ಕು ಚಕ್ರದ ಸ್ಕೂಟರ್ ನೀಡುತ್ತಾರೆ. ನನಗೂ ಒಂದು ಸ್ಕೂಟರ್ ಕೊಡಿ ಎಂದು ಕಳೆದ ನಾಲ್ಕು ವರ್ಷಗಳಿಂದ ಶಾಸಕರಿಗೆ ಮನವಿ ಮಾಡುತ್ತಿದ್ದೇನೆ, ಸ್ಕೂಟರ್ ಕೊಟ್ಟಿಲ್ಲ. ನೀವು ನನಗೊಂದು ಸ್ಕೂಟರ್ ಕೊಡಿಸಿ ಎಂದು ವಿಕಲಚೇತನ ಯುವಕ ಅಜ್ಜಿನಡ್ಕದ ಕೃಷ್ಣಪ್ಪ ಎಂಬವರು ಶಾಸಕರಿಗೆ ದೂರಿನ ಜೊತೆ ಮನವಿಯನ್ನು ಸಲ್ಲಿಸಿದ್ದಾರೆ.
ಸುಧಾನ ಶಾಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ ಕೃಷ್ಣಪ್ಪರು ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ವೇದಿಕೆಗೆ ಅವರನ್ನು ಸಂಬಂಧಿಕರು ಎತ್ತಿಕೊಂಡು ಬಂದರು. ಇವರ ಸ್ಥಿತಿಯನ್ನು ಕಂಡು ಶಾಸಕರೇ ಅವರನ್ನು ಕುರ್ಚಿಯ ಮೇಲೆ ಕೂರಿಸಿದರು. ಬಳಿಕ ಅವರ ಅರ್ಜಿಯನ್ನು ಸ್ವೀಕರಿಸಿದ ಶಾಸಕರು ನಿಮಗೆ ಏನು ಬೇಕು ಎಂದು ಕೇಳಿದ್ದಾರೆ. ಆ ವೇಳೆ ತನ್ನ ಸಮಸ್ಯೆಯನ್ನು ಕೃಷ್ಣಪ್ಪರು ಶಾಸಕರ ಬಳಿ ತೋಡಿಕೊಂಡರು. ನಿಮ್ಮ ಬೇಡಿಕೆಯನ್ನು ಈಡೇರಿಸುತ್ತೇನೆ ಎಂದು ಶಾಸಕರು ಭರವಸೆ ನೀಡಿದಾಗ ಕೃಷ್ಣಪ್ಪರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here