ಪಾಣಾಜೆ : ಕಾಮ್ ಸ್ಕೋಪ್ ಸಂಸ್ಥೆಯಿಂದ ಶೈಕ್ಷಣಿಕ ಕಿಟ್ ವಿತರಣೆ

0

ಪಾಣಾಜೆ: ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಉನ್ನತೀಕರಿಸಲು ಕಾಮ್ ಸ್ಕೋಪ್ ಸಂಸ್ಥೆ ಯಿಂದ ನೀಡಲ್ಪಟ್ಟ ಶೈಕ್ಷಣಿಕ ಕಿಟ್ ಗಳನ್ನು ಪಾಣಾಜೆ ಸುಬೋಧ ಪ್ರೌಢಶಾಲೆಯ ಶಾಲಾ ಸಂಚಾಲಕರಾದ ಗಿಳಿಯಾಲು ಮಹಾಬಲೇಶ್ವರ ಭಟ್ ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಯಶ್ರೀ ದೇವಸ್ಯ ಜೂ.12 ರಂದು ವಿದ್ಯಾರ್ಥಿಗಳಿಗೆ ವಿತರಿಸಿದರು.

   ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ಎಸ್ ಪಿ ಅವರು ಕಾಮ್ ಸ್ಕೋಪ್ ಸಂಸ್ಥೆಯ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು. ಮುಖ್ಯ ಶಿಕ್ಷಕ ಶ್ರೀಪತಿ ಭಟ್ ಐ ಶೈಕ್ಷಣಿಕ ಕಿಟ್ ಗಳನ್ನು ಪಡೆದ ನೀವೆಲ್ಲ ಅದೃಷ್ಟವಂತರು ಅದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.

    ಸಹ ಶಿಕ್ಷಕರಾದ ನಿರ್ಮಲ, ವಿನುತಾ ಶಾರದ, ಕವಿತಾ, ರಕ್ಷಿತಾ ಹಾಗೂ ಶಿಕ್ಷಕೇತರ ಸಿಬ್ಬಂದಿಯ ಎ. ಎನ್. ಕೊಳಂಬೆ ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here