ಶ್ರೀದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನದಿಂದ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ

0

ಪುತ್ತೂರು: ಬೊಳುವಾರು ಶ್ರೀದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನದಿಂದ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆಯು ಜೂ.11 ರಂದು ಬೊಳುವಾರು ಶ್ರೀದುರ್ಗಾ ಉಳ್ಳಾಲ್ತಿ ಮಲರಾಯ ದೇವಸ್ಥಾನದಲ್ಲಿ ನಡೆಯಿತು.
ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಹಿಮ್ಮೇಳ ವಾದಕರಾದ ಪದ್ಯಾಣ ಶಂಕರನಾರಾಯಣ ಭಟ್ ರವರು ಯಕ್ಷಗಾನ ನಾಟ್ಯ ತರಗತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು. ಅರ್ಥಧಾರಿಗಳಾದ ಪಕಳಕುಂಜ ಶ್ಯಾಂಭಟ್ ರವರು ಜೊತೆಗಿದ್ದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ಹಾಗೂ ಹಿಮ್ಮೆಳ ಗುರುಗಳಾದ ಗೋವಿಂದ ನಾಯಕ್ ಪಾಲೆಚ್ಚಾರುರವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಕಾರ್ಯದರ್ಶಿ ಪ್ರಸನ್ನ ಕುಮಾರ್ ಸ್ವಾಗತಿಸಿ, ಇಂಜಿನಿಯರ್ ಶಂಕರ ಭಟ್ ವಂದಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯದರ್ಶಿ ವಿ.ಕೆ ಶೆಟ್ಟಿ, ಪೋಷಕರಾದ ವಸಂತ ನಾಯಕ್ , ರಾಮ ಕೆ, ನವೀನ್ ರೈ, ಕೇಶವ ಪ್ರಸನ್ನ, ಸ್ವರ್ಣಲತಾ ಸಹಿತ ಹಲವರು ಉಪಸ್ಥಿತರಿದ್ದರು.

ಉದ್ಘಾಟನಾ ದಿನ 10 ವಿದ್ಯಾರ್ಥಿಗಳು ನಾಟ್ಯಾಭ್ಯಾಸಕ್ಕೆ ನೊಂದಾಯಿಸಿ ಶ್ರೀ ಕ್ಷೇತ್ರದಲ್ಲಿಯೇ ನಾಟ್ಯಾಭ್ಯಾಸವನ್ನು ನಾಟ್ಯಗುರುಗಳಾದ ಪ್ರಚೇತ ಆಳ್ವರವರಿಂದ ಕಲಿತರು. ಯಕ್ಷಗಾನ ಭಾಗವತಿಕೆ, ಚೆಂಡೆ, ಮದ್ದಳೆ ತರಗತಿಗಳು ಈ ಮೊದಲೇ ಯಕ್ಷಕಲಾ ಪ್ರತಿಷ್ಠಾನವು ನಡೆಸಿಕೊಂಡು ಬರುತ್ತಿದ್ದು, ಇದೀಗ ನಾಟ್ಯ ತರಗತಿಗಳನ್ನು ಆರಂಭಿಸಿರುವುದಾಗಿದೆ. ತರಗತಿಗಳಿಗೆ ಸೇರಲಿಚ್ಚಿಸುವ ವಿದ್ಯಾರ್ಥಿಗಳು ಮುಮ್ಮೇಳ ತರಗತಿಗಳಿಗೆ ಗುರುಗಳಾದ ಪ್ರಚೇತ ಆಳ್ವ(8494916615), ಕಾರ್ಯದರ್ಶಿ ಶಂಕರ ಭಟ್ (9448120721), ಹಿಮ್ಮೇಳ ತರಗತಿಗಳಿಗೆ ಗೋವಿಂದ ನಾಯಕ್ ಪಾಲೆಚ್ಚಾರು (9740790722)ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here