ಮೊಬೈಲ್ ಆ್ಯಪ್ ಮೂಲಕ ಪುಣ್ಚಪ್ಪಾಡಿ ಶಾಲಾ ಸಂಸತ್ತು ಚುನಾವಣೆ-ಮುಖ್ಯಮಂತ್ರಿ ಗಗನ್ ಪಿ., ಉಪಮುಖ್ಯ ಮಂತ್ರಿ ಸವಿನ್ ಎಸ್

0

ಪುತ್ತೂರು: ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣಾ ಘೋಷಣೆ, ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ಗುರುತಿನ ಚಿಹ್ನೆಗಳ ಹಂಚಿಕೆ, ಚುನಾವಣಾ ಪ್ರಚಾರ ನಡೆಸಲಾಯಿತು. ಅಂತಿಮವಾಗಿ ಮೊಬೈಲ್ ಆ್ಯಪ್ ಮೂಲಕ ಮತದಾನ ಕೇಂದ್ರದಲ್ಲಿ ಮತದಾನ ನಡೆಸಿ ಫಲಿತಾಂಶ ಘೋಷಣೆ ಮಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು.


ಶಾಲಾ ಮುಖ್ಯಮಂತ್ರಿಯಾಗಿ ಗಗನ್ ಪಿ. 7 ನೇ ತರಗತಿ, ಮತ್ತು ಉಪಮುಖ್ಯಮಂತ್ರಿಯಾಗಿ ಸವಿನ್ ಎಸ್ 6ನೇ ತರಗತಿ ಆಯ್ಕೆಯಾದರು. ವಿರೋಧ ಪಕ್ಷದ ನಾಯಕಿಯಾಗಿ ದಿಶಾ ವಿ.ಡಿ., ಶಿಕ್ಷಣ ಮಂತ್ರಿಯಾಗಿ ದಿಶಾ ಡಿ.ಕೆ. ಆರೋಗ್ಯಮಂತ್ರಿ ಸುಶಾಂತ್ ಕೆ., ಆಹಾರ ಮಂತ್ರಿ ಪ್ರಶಾಂತ್, ಕ್ರೀಡಾ ಮಂತ್ರಿ ಪುನೀತ್ ಡಿ.ಎನ್, ರಕ್ಷಣಾ ಮಂತ್ರಿ ನಿತ್ಯ ಕುಮಾರಿ, ನೀರಾವರಿ ಮಂತ್ರಿ ಉಲ್ಲಾಸ್ ಎಂ, ವಾರ್ತ ಮಂತ್ರಿ ಭವಿತ್, ಕಾನೂನು ಮಂತ್ರಿ ಪೃಥ್ವಿ, ಗ್ರಂಥಾಲಯ ಮಂತ್ರಿ ಸಂಜನಾ ಕೆ., ತೋಟಗಾರಿಕಾ ಮಂತ್ರಿ ವಿಕ್ಯಾತ್ ಎಲ್.ಬಿ. ಸ್ವಚ್ಛತಾ ಮಂತ್ರಿ ವಿನ್ಯಾ, ಆಯ್ಕೆಯಾದರು. ಶಾಲಾ ಮುಖ್ಯಗುರು ರಶ್ಮಿತಾ ನರಿಮೊಗರು ಪ್ರಮಾಣ ವಚನ ಬೋಧಿಸಿದರು. ಹಾಗೂ ಪದವೀಧರ ಶಿಕ್ಷಕಿ ಫ್ಲಾವಿಯಾ, ಚಂದ್ರಿಕಾ ಎಸ್. ತೃಪ್ತಿ ಚುನಾವಣಾ ಅಧಿಕಾರಿಗಳಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here