ಕೌಕ್ರಾಡಿ ಶಾಲಾ ಸಂಸತ್ತು ರಚನೆ

0

ನೆಲ್ಯಾಡಿ: ಕೌಕ್ರಾಡಿ ಸಂತ ಜಾನರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಯಿತು.


ಜೂ.8ರಂದು ಶಾಲೆಯಲ್ಲಿ ನಡೆದ ಪ್ರಜಾಪ್ರಭುತ್ವ ಮಾದರಿಯ ಮತದಾನದಲ್ಲಿ ಶಾಲಾ ನಾಯಕಿಯಾಗಿ ಏಳನೇ ತರಗತಿಯ ಪ್ರೆಸಿಲ್ಲಾ ಗಲ್ಭಾವೋ ಹಾಗೂ ಉಪ ನಾಯಕಿಯಾಗಿ
ಏಳನೇ ತರಗತಿಯ ಗ್ರೀಷ್ಮಾ ಆಯ್ಕೆಯಾದರು. ಅದೇ ರೀತಿ ಸಂಸತ್ತಿನ ಇತರ ಸಚಿವರನ್ನು ಆರಿಸಲಾಯಿತು. ಶಾಲಾ ಶಿಕ್ಷಕರು ಆಯ್ಕೆ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಮುಖ್ಯ ಶಿಕ್ಷಕಿ ಜೆಸಿಂತಾ ಡಿ ಸೋಜ ಅವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here