*ಬಂಟ ಸಮಾಜ ಪಕ್ಷಭೇದ ಮರೆತು ಒಂದಾಗಬೇಕು- ಶಶಿಕುಮಾರ್ ರೈ ಬಾಲ್ಯೊಟ್ಟು
*ಶಶಿಕುಮಾರ್ ರೈ ಸಂಘಟನಾ ಚತುರ-ಸವಣೂರು ಸೀತಾರಾಮ ರೈ
*ಬಂಟ ಸಮಾಜದ ಕಾರ‍್ಯಕ್ರಮದಲ್ಲಿ ರಾಜಕೀಯ ಇಲ್ಲ- ಕಾವು ಹೇಮನಾಥ ಶೆಟ್ಟಿ
*ಎಲ್ಲಾ ಗ್ರಾಮ ಗ್ರಾಮಗಳ ಬಂಟರು ಬರಬೇಕು- ದಯಾನಂದ ರೈ
*ಮಹಿಳಾ ಬಂಟರ ಸಂಘದಿಂದ ಪೂರ್ಣ ಸಹಕಾರ- ಸಬಿತಾ ಭಂಡಾರಿ
ಪುತ್ತೂರು: ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜೂ. 18ರಂದು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿರವರಿಗೆ ಅಭಿನಂದನಾ ಸಮಾರಂಭ ಮತ್ತು ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದ್ದು, ಸಮಾರಂಭದ ಸಿದ್ಧತಾ ಸಭೆಯು ಪುತ್ತೂರು ಬಂಟರ ಭವನದಲ್ಲಿ ಜರಗಿತು.
*ಬಂಟ ಸಮಾಜ ಪಕ್ಷಭೇದ ಮರೆತು ಒಂದಾಗಬೇಕು- ಶಶಿಕುಮಾರ್ ರೈ ಬಾಲ್ಯೊಟ್ಟು
ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಅಶೋಕ್ ರೈಯವರ ಸನ್ಮಾನ ಸಮಾರಂಭ ಅದ್ದೂರಿಯಾಗಿ ನಡೆಯಬೇಕು. ಇದಕ್ಕೆ ಬಂಟ ಸಮಾಜ ಪಕ್ಷಭೇದ ಮರೆತು ಒಂದಾಗಬೇಕು. ನಮ್ಮ ಸಮಾಜದ ವ್ಯಕ್ತಿಯರ್ವರು ಶಾಸಕರಾಗಿರುವುದು ಪುತ್ತೂರಿಗೆ ಹೆಮ್ಮೆ ತರುವ ವಿಷಯ ಎಂದು ಹೇಳಿದರು. ಪ್ರತಿ ಗ್ರಾಮ ಗ್ರಾಮದಿಂದ ಅಶೋಕ್ ರೈ ಸನ್ಮಾನ ಸಮಾರಂಭಕ್ಕೆ ಬಂಟರು ಬರುವ ಮೂಲಕ, ಬಂಟ ಸಮಾಜದ ಒಗ್ಗಟನ್ನು ತೋರಿಸಿಕೊಡಬೇಕು ಎಂದು ಹೇಳಿದರು.
ಶಶಿಕುಮಾರ್ ರೈ ಸಂಘಟನಾ ಚತುರ-ಸವಣೂರು ಸೀತಾರಾಮ ರೈ
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ‘ಸಹಕಾರ ರತ್ನ’ ಸವಣೂರು ಕೆ.ಸೀತಾರಾಮ ರೈರವರು ಮಾತನಾಡಿ ಬಂಟ ಸಮಾಜದಲ್ಲಿ ನಾವೆಲ್ಲ ಒಂದೇ ಇದರಲ್ಲಿ ಪಕ್ಷ ಭೇದ ಇಲ್ಲ. ಅಶೋಕ್ ರೈಯವರ ಸನ್ಮಾನ ಸಮಾರಂಭ ಮಾದರಿ ಕಾರ‍್ಯಕ್ರಮವಾಗಿ ಬಂಟ ಸಮಾಜಕ್ಕೆ ಹೆಸರು ಬರಬೇಕು. ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಸಂಘಟನಾ ಚತುರಾಗಿದ್ದ, ಇವರು ಈ ಮೊದಲು ಅನೇಕ ಯಶಸ್ಸಿ ಕಾರ‍್ಯಕ್ರಮ ಸಂಘಟಿಸಿ, ಹೆಸರು ತಂದಿದ್ದಾರೆ. ಅವರ ನೇತ್ರತ್ವದಲ್ಲಿ ನಡೆಯುವ ಅಶೋಕ್ ರೈ ಅಭಿನಂದನಾ ಸಮಾರಂಭ ಯಶಸ್ಸಿಯಾಗಲಿ, ಜೊತೆಗೆ ದ.ಕ ಹಾಗೂ ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಬಂಟ ಸಮಾಜದ ಶಾಸಕರನ್ನು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಪುತ್ತೂರಿಗೆ ಕರೆಸಿ ಬಂಟ ಸಮಾಜದ ಸನ್ಮಾನವನ್ನು ಏರ್ಪಡಿಸುವಂತೆ ಸಲಹೆಯನ್ನು ಸೀತಾರಾಮ ರೈಯವರು ನೀಡಿದರು.
ಬಂಟ ಸಮಾಜದ ಕಾರ‍್ಯಕ್ರಮದಲ್ಲಿ ರಾಜಕೀಯ ಇಲ್ಲ- ಕಾವು ಹೇಮನಾಥ ಶೆಟ್ಟಿ
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ರವರು ಮಾತನಾಡಿ ಬಂಟ ಸಮಾಜದಿಂದ ಉನ್ನತ ಸ್ಥಾನವನ್ನು ಪಡೆದಿರುವ ವ್ಯಕ್ತಿ ಯಾವುದೇ ಪಕ್ಷದಲ್ಲಿ ಇದ್ದರೂ ನಾವು ಬಂಟರು ಅದನ್ನು ಗೌರವಿಸಬೇಕು. ಬಂಟ ಸಮಾಜದ ಕಾರ‍್ಯಕ್ರಮದಲ್ಲಿ ರಾಜಕೀಯ ಇಲ್ಲ. ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಉನ್ನತ ಸ್ಥಾನದಲ್ಲಿ ಇದ್ದಾರೆ, ಇದು ಬಂಟರಿಗೆ ಹೆಮ್ಮೆ ವಿಚಾರ, ಇದೀಗ ನಮ್ಮ ಸಮಾಜದ ಅಶೋಕ್ ರೈ ಶಾಸಕರಾಗಿರುವುದು ಖುಷಿಯ ವಿಚಾರ. ಇವರನ್ನು ಸನ್ಮಾನಿಸುವ ಕಾರ‍್ಯಕ್ರಮ ಬಂಟ ಸಮಾಜಕ್ಕೆ ಗೌರವವನ್ನು ತರುವ ಕಾರ‍್ಯಕ್ರಮವಾಗಿದೆ ಎಂದು ಹೇಳಿ, ಅಶೋಕ್ ರೈ ಯವರ ಪುತ್ತೂರಿನ ಅಭಿವೃದ್ಧಿಯ ಕನಸಿಗೆ ಬಂಟ ಸಮಾಜ ಬೆಂಬಲ ನೀಡಬೇಕು ಎಂದು ಹೇಳಿದರು.
ಎಲ್ಲಾ ಗ್ರಾಮ ಗ್ರಾಮಗಳ ಬಂಟರು ಬರಬೇಕು- ದಯಾನಂದ ರೈ
ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ ಅಶೋಕ್ ರೈಯವರ ಸನ್ಮಾನ ಸಮಾರಂಭವು ಅಚ್ಚುಕಟ್ಟಾಗಿ ನಡೆಯಬೇಕು. ಎಲ್ಲಾ ಗ್ರಾಮ ಗ್ರಾಮಗಳ ಬಂಟರು ಬರಬೇಕು. ಸಮಾಜದ ಒಗ್ಗಟು ಸದಾ ಮುಂದುವರಿಬೇಕು ಎಂದರು.
ಮಹಿಳಾ ಬಂಟರ ಸಂಘದಿಂದ ಪೂರ್ಣ ಸಹಕಾರ- ಸಬಿತಾ ಭಂಡಾರಿ
ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿರವರು ಮಾತನಾಡಿ ಮಹಿಳಾ ಬಂಟರ ಸಂಘದಿಂದ ಅಶೋಕ್ ರೈ ಅಭಿನಂದನಾ ಸಮಾರಂಭಕ್ಕೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಹಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಬಂಟರ ಸಂಘದ ಪ್ರಧಾನ ಕಾರ‍್ಯದರ್ಶಿ ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಉಪಾಧ್ಯಕ್ಷ ರೋಶನ್ ರೈ ಬನ್ನೂರು, ಮಾತೃ ಸಂಘದ ನಿರ್ದೇಶಕರುಗಳಾದ ಕುಂಬ್ರ ದುರ್ಗಾಪ್ರಸಾದ್ ರೈ, ನೊಣಾಲು ಜೈರಾಜ್‌ಭಂಡಾರಿ ಡಿಂಬ್ರಿ, ವಾಣಿ ಶೆಟ್ಟಿ ನೆಲ್ಯಾಡಿ, ಬಂಟರ ಸಂಘದ ಪ್ರಮುಖರಾದ ಎ.ಕೆ.ಜಯರಾಮ ರೈ, ಸಂತೋಷ್ ಶೆಟ್ಟಿ ಸಾಜ, ಶಿವರಾಮ ಆಳ್ವ ಬಳ್ಳಮಜಲುಗುತ್ತು, ಎಂ.ಆರ್.ಜಯಕುಮಾರ್ ರೈ ಮಿತ್ರಂಪಾಡಿ, ದೇರ್ಲ ಅಮ್ಮಣ್ಣ ರೈ ಪಾಪೆಮಜಲು, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಕರುಣಾಕರ ರೈ ದೇರ್ಲ, ಅನಿತಾ ಹೇಮನಾಥ ಶೆಟ್ಟಿ ಕಾವು, ಹರಿಣಾಕ್ಷಿ ಜೆ.ಶೆಟ್ಟಿ, ಅನುಶ್ರೀ ಶೆಟ್ಟಿ, ಅಮಿತಾ ಎಸ್ ಶೆಟ್ಟಿ, ಮಲ್ಲಿಕಾ ಜೆ.ರೈ, ವತ್ಸಲಾ ಪದ್ಮನಾಭ ಶೆಟ್ಟಿ, ಲಾವಣ್ಯ ನಾಕ್, ಜಗನ್ಮೋಹನ್ ರೈ ಸೂರಂಬೈಲು, ದಯಾನಂದ ರೈ ಕೊರ್ಮಂಡ, ಸದಾಶಿವ ರೈ ಸೂರಂಬೈಲು, ದಿವ್ಯನಾಥ ಶೆಟ್ಟಿ ಕಾವು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಸದಾನಂದ ಶೆಟ್ಟಿ ಕೊರೇಲು, ರವಿಪ್ರಸಾದ್ ಶೆಟ್ಟಿ ಬನ್ನೂರು, ಕೆ.ಸಿ. ಅಶೋಕ್ ಶೆಟ್ಟಿ, ಉಮಾಪ್ರಸಾದ್ ರೈ ನಡುಬೈಲು, ರವಿಚಂದ್ರ ರೈ ಕುಂಬ್ರ, ಭಾಸ್ಕರ್ ರೈ ಎಂ. ರವರುಗಳು ಉಪಸ್ಥಿತರಿದ್ದರು.