





ತಾಲೂಕು ಮಟ್ಟದ ಶ್ಲೋಕ ಕಂಠಪಾಠ: ಸನ್ಮಯ್ ಎನ್ ಪ್ರಥಮ


ಪುತ್ತೂರು: ಪಂಜಾಬಿನ ಜಲಂಧರ್ ಸರ್ವಹಿತಕಾರಿ ಕೇಶವ್ ವಿದ್ಯಾನಿಕೇತನ ವಿದ್ಯಾಧಾಮದಲ್ಲಿ ವಿದ್ಯಾಭಾರತಿ ಅಖಿಲ ಭಾರತಿ ಸಂಸ್ಥಾನ ಹಮ್ಮಿಕೊಂಡಿದ್ದ ಕಿಶೋರ ವರ್ಗದ ರಾಷ್ಟ್ರೀಯ ಮಟ್ಟದ ಗಣಿತ ಮಾದರಿ ಪ್ರದರ್ಶನದಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯ ವಿದ್ಯಾರ್ಥಿ ಸಾತ್ವಿಕ್ ಜಿ. ದ್ವಿತೀಯ ಸ್ಥಾನ ಪಡೆದಿದ್ಧಾರೆ.





ನವೆಂಬರ್ 6ರಿಂದ 9ರವರೆಗೆ ಕಿಶೋರವರ್ಗದದಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ಸಾತ್ವಿಕ್ ಅವರು ಪೆರ್ನೆ ಹನುಮಾಜೆ ನಿವಾಸಿ ಗಿರೀಶ ಗೌಡ ಹಾಗೂ ಸುಮಿತ್ರಾ ದಂಪತಿಯ ಪುತ್ರ.
ಶ್ಲೋಕ ಪಠಣದಲ್ಲಿ ಪ್ರಥಮ:
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಪ್ರೌಢ ವಿಭಾಗದ ತಾಲೂಕು ಮಟ್ಟದ ಪ್ರೌಢಶಾಲಾ ಹಂತದ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಸನ್ಮಯ್ ಎನ್. ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಿ.ಬಿ.ಎಸ್.ಇ.ಬಪ್ಪಳಿಗೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪುತ್ತೂರು ಸಾಲ್ಮರ ನಿವಾಸಿಗಳಾದ ಡಾ.ಸಂತೋಷ್ ಎನ್. ಹಾಗೂ ಡಾ. ಶ್ರುತಿ ಎಸ್. ದಂಪತಿಯ ಪುತ್ರನಾಗಿದ್ದಾರೆ.










