ಪುತ್ತೂರು: ಮಳೆಗಾಲ ಪ್ರಾರಂಭವಗಿರುವ ಹಿನ್ನೆಲೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಟೆಲಿಪೋನ್/ವಿದ್ಯುತ್ ಕೇಬಲ್/ಕುಡಿಯುವ ನೀರು ಕೊಳವೆ ಸೇರಿದಂತೆ ಇನ್ನಿತರ ರಸ್ತೆ ಅಗೆತ ಮಾಡುವುದನ್ನು ಜೂ.15 ರಿಂದ ನಾಲ್ಕು ತಿಂಗಳು ನಿಷೇಧಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಸೂಚನೆ ನೀಡಿದ್ದಾರೆ.
ಮಳೆಗಾಲದಲ್ಲಿ ರಸ್ತೆ ಬದಿಯ ಅಗೆತದಿಂದ ಮಣ್ಣು ಸಡಿಲವಾಗಿ ವಾಹನ, ಸಾರ್ವಜನಿಕರಿಗೆ ಅಪಾಯ ಸಂಭವಿಸುವ ಸಾಧ್ಯತೆ ಮತ್ತು ಇತರ ಅವಘಡ ಅಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜೂ. 15 ರಿಂದ ಸೆ.30ರ ತನಕ ರಸ್ತೆ ಅಗೆತ ಮಾಡುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರು ತಿಳಿಸಿದ್ದಾರೆ.