ಪುತ್ತೂರು: ಮನೆಯಲ್ಲಿ ಯಾರೂ ಇಲ್ಲದೇ ಇದ್ದ ಸಂದರ್ಭದಲ್ಲಿ ಕಳ್ಳರು ನುಗ್ಗಿ ಚಿನ್ನಾಭರಣ ಕಳವು ಮಾಡಿರುವ ಘಟನೆ ವರದಿಯಾಗಿದೆ.
ಕೊಳ್ನಾಡು ಸೂರಿಬೈಲ್ ನಿವಾಸಿ ಮೊಹಮ್ಮದ್ ರಿಯಾಝ್ ಎಂಬವರು ಈ ಕುರಿತು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ.ಜೂ.12ರಂದು ಸಂಜೆ 6 ಗಂಟೆಗೆ ಮನೆಯ ಬಾಗಿಲಿಗೆ ಬೀಗವನ್ನು ಹಾಕಿ ಪತ್ನಿ ಮತ್ತು ಮಕ್ಕಳೊಂದಿಗೆ ಸೂರಿಬೈಲಿನಲ್ಲಿರುವ ಮಾವನ ಮನೆಗೆ ಹೋಗಿದ್ದು ಜೂ.13ರಂದು ಬೆಳಿಗ್ಗೆ 8.30 ಗಂಟೆಗೆ ಬಂದು ನೋಡಿದಾಗ ಮನೆಯ ಮುಂಭಾಗದ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಮೀಟಿ ತೆರೆದು ಒಳಪ್ರವೇಶಿಸಿ ಬೆಡ್ರೂಮಿನ ಗೋದ್ರೇಜಿನ ಲಾಕರ್ನಲ್ಲಿ ಇಟ್ಟಿದ್ದ 12 ಗ್ರಾಂ ತೂಕದ ಮಗುವಿನ ಕಿವಿಯ ಚಿನ್ನದ ಓಲೆಗಳು 3 ಜೊತೆ, ತಲಾ 3 ಗ್ರಾಂನಷ್ಟು ತೂಕ ಉಂಗುರಗಳು-3 , ತಲಾ 12 ಗ್ರಾಂ ತೂಕದ ಮಗುವಿನ ಬೆಳ್ಳಿಯ ಸೊಂಟದ ಚೈನುಗಳು-2, ಪತ್ನಿಯ 12 ಗ್ರಾಂ ತೂಕದ ಬೆಳ್ಳಿಯ ಕಾಲು ಚೈನು-01, 10 ಗ್ರಾಂ ತೂಕದ ಮಗುವಿನ ಒಂದು ಜೊತೆ ಬೆಳ್ಳಿಯ ಕಾಲು ಚೈನು, ಕ್ಯಾಸಿಯೋ ವಾಚ್- 01, ನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಕಳವಾಗಿರುವ ಚಿನ್ನ, ಬೆಳ್ಳಿಯ ಆಭರಣಗಳು ಹಾಗೂ ವಾಚ್ನ ಮೌಲ್ಯ ರೂ.87,220 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.