ಅಂಬಿಕಾ ವಿದ್ಯಾಲಯದಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ

0

ಜೀವನದಲ್ಲಿ ಪುಸ್ತಕದಷ್ಟೇ ಲಲಿತಕಲೆಗಳೂ ಮುಖ್ಯ : ವಿದ್ವಾನ್ ದೀಪಕ್ ಕುಮಾರ್
ಪುತ್ತೂರು : ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಶನಿವಾರ ನಡೆಯಿತು. ಈ ಕಾರ್ಯಕ್ರಮಕ್ಕೆ ಪುತ್ತೂರಿನ ಮೂಕಾಂಬಿಕಾ ಕಲ್ಚರ್ ಅಕಾಡೆಮಿಯ ನಿರ್ದೇಶಕ, ಭರತನಾಟ್ಯ ಕಲಾವಿದ ವಿದ್ವಾನ್ ದೀಪಕ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಶಿಕ್ಷಣ ಪ್ರಾಪಂಚಿಕ ವಿದ್ಯೆಯನ್ನು ನೀಡುತ್ತದೆ. ವಿದ್ಯಾರ್ಥಿಗಳಿಗೆ ಪುಸ್ತಕದ ಲಲಿತ ಕಲೆಯೂ ಕೂಡ ಜೀವನದಲ್ಲಿ ಅತೀ ಮುಖ್ಯ. ಲಲಿತ ಕಲೆ ಜೀವನವನ್ನು ಮುನ್ನಡೆಸಲು ಸಹಕಾರಿಯಾಗುತ್ತದೆ. ಹಾಗಾಗಿ ಲಲಿತ ಕಲೆಗಳನ್ನು ಕಲಿಯುವುದರ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ತಿಳಿಸಿದರು.
ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಭಟ್ ಮಾತನಾಡಿ ನಾವು ಜೀವನದಲ್ಲಿ ಲಲಿತ ಕಲೆಯನ್ನು ಸರಿಯಾಗಿ ಅಳವಡಿಸಿಕೊಳ್ಳಬೇಕು. ಈ ಕಲೆಗಳು ನಮಗೆ ಅತ್ಯಂತ ಅವಶ್ಯಕ. ದೊರೆಯುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳುವುದರೊಂದಿಗೆ ಯಾವ ತರಗತಿಗಳು ಯಾವಾಗ ನಡೆಯಲಿದೆ ಎಂಬ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ನಮ್ಮ ಸಂಸ್ಕೃತಿ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಪಸರಿಸಬೇಕು. ಇಂದು ನಮ್ಮ ಶಿಕ್ಷಣ ಮೂಲಭೂತವಾಗಿ ಏನು ಬೇಕೋ ಅದನ್ನು ನೀಡುತ್ತಿಲ್ಲ, ಶಾಲೆಗಳಲ್ಲಿ ಜೀವನಕ್ಕೆ ಬೇಕಾಗುವ ಶಿಕ್ಷಣವನ್ನು ನೀಡುವುದು ಅಗತ್ಯ ಎಂದರು. ವಿದ್ಯಾರ್ಥಿಗಳು ಭಾರತೀಯ ಕಲೆಯನ್ನು ಕಲಿಯುವುದರ ಜೊತೆಗೆ ಗೌರವಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಕರಾಟೆ ಮಾರ್ಗದರ್ಶಕ ಶಿವಪ್ರಸಾದ್, ಯಕ್ಷಗಾನ ಮಾರ್ಗದರ್ಶಕ ಬಾಲಕೃಷ್ಣ ಉಡ್ಡಂಗಳ ಉಪಸ್ಥಿತರಿದ್ದರು. ಶಿಕ್ಷಕಿ ಶ್ರುತಿ ಸ್ವಾಗತಿಸಿ, ಸುಜಯ ವಂದಿಸಿದರು. ಕಾರ್ಯಕ್ರಮವನ್ನು ಸುಷ್ಮಾ ನಿರ್ವಹಿಸಿದರು.

LEAVE A REPLY

Please enter your comment!
Please enter your name here