ಸವಣೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಮೊಗರು ಇಲ್ಲಿಯ ಶಾಲಾ ಮಂತ್ರಿ ಮಂಡಲದ ಚುನಾವಣೆಯು ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆಯಿತು.
ಶಾಲಾ ನಾಯಕಿಯಾಗಿ 7ನೇ ತರಗತಿಯ ಫಾತಿಮಾ ಶಂಸಿಯ್ಯಾ ನಾಯಕನಾಗಿ 6ನೇ ತರಗತಿಯ ಮೊಹಮ್ಮದ್ ನಿಶಾನ್ ನನ್ನು ಆಯ್ಕೆ ಮಾಡಲಾಯಿತು. ಗ್ರಹಮಂತ್ರಿಯಾಗಿ ಮಹಮ್ಮದ್ ಸಿನಾನ್( 7ನೇ, ಶಿಕ್ಷಣ ಮಂತ್ರಿಯಾಗಿ ಕೃಪಾ( 6ನೇ), ಆರೋಗ್ಯಮಂತ್ರಿಯಾಗಿ ರಿಫಾ ಫಾತಿಮ (7ನೇ) ಮತ್ತು ಮುರ್ಷಿದಾ(7ನೇ), ಆಹಾರ ಮಂತ್ರಿಯಾಗಿ ಮಹಮ್ಮದ್ ಅನ್ ಶೀಫ್ (7ನೇ),ನೀರಾವರಿ ಮಂತ್ರಿಯಾಗಿ ಗೌತಮ್. ಎಸ್ (7ನೇ), ವಾರ್ತಾ ಮಂತ್ರಿಯಾಗಿ ಫಾತಿಮತ್ ನಸೀಬಾ. ಪಿ (6ನೇ), ಸ್ವಚ್ಛತಾ ಮಂತ್ರಿಯಾಗಿ ಖದೀಜತ್ ಸಹ್ ಲ (7ನೇ) ಕಾನೂನು ಮಂತ್ರಿಯಾಗಿ ಎ. ಎನ್. ಅಜ್ ಮಾಲ್ (7ನೇ )ಗ್ರಂಥಾಲಯ ಮಂತ್ರಿಯಾಗಿ ಫಾತಿಮತ್ ಝಈಮ(6ನೇ )ತೋಟಗಾರಿಕಾ ಮಂತ್ರಿಗಳಾಗಿ ಮಹಮ್ಮದ್ ಅರ್ಷಖ್ ಮತ್ತು ಮೋನಿಷ್. ಕೆ (7ನೇ), ಅಭಿವೃದ್ಧಿ ಮಂತ್ರಿಗಳಾಗಿ ಸಲ್ಮಾನ್ ಫಾರೀಸ್ ಜೈನುಲ್ ಆಬಿದ್ (7ನೇ),ವಿರೋಧ ಪಕ್ಷದ ನಾಯಕನಾಗಿ ಮಹಮ್ಮದ್ ಸುಹೈಬ್ 7ನೇ ಆಯ್ಕೆಯಾದರು. ಮುಖ್ಯಗುರುಗಳಾದ ಮಮತಾ. ಎನ್ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಎಂ.ಎ ರಫೀಕ್ ಹಾಗೂ ಸಹ ಶಿಕ್ಷಕರು ಸಹಕರಿಸಿದರು.