ಬೆಳಂದೂರು ಶಾಲಾ ಮಂತ್ರಿ ಮಂಡಲ ರಚನೆ

0

ನಾಯಕ ಜೀವನ್, ಉಪನಾಯಕಿ ಚೈತನ್ಯ

ಕಾಣಿಯೂರು: ಬೆಳಂದೂರು ಸ.ಹಿ.ಪ್ರಾ.ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಯಿತು. ಶಾಲಾ ನಾಯಕನಾಗಿ 7 ನೇ ತರಗತಿಯ ಜೀವನ್ , ಉಪನಾಯಕಿಯಾಗಿ 6 ನೇ ತರಗತಿ ಚೈತನ್ಯರನ್ನು ಆಯ್ಕೆ ಮಾಡಲಾಯಿತು.

ಶಿಕ್ಷಣ ಮಂತ್ರಿಯಾಗಿ ಪ್ರನ್ವಿ , ಹಣಕಾಸು ಮಂತ್ರಿಯಾಗಿ ಮಿಕದಾದ್ , ಆರೋಗ್ಯ ಮಂತ್ರಿಯಾಗಿ ಮಿಸ್ಬಾಹ್ , ಆಹಾರ ಮಂತ್ರಿಯಾಗಿ ಶೈಮಾ, ಕ್ರೀಡಾ ಮಂತ್ರಿಯಾಗಿ ಪ್ರೀತಮ್, ಸಾಂಸ್ಕೃತಿಕ ಕಾರ್ಯದರ್ಶಿ 7ನೇ ತರಗತಿಯ ಅನುಶ್ರೀ, ಗ್ರಂಥಾಲಯ ಮಂತ್ರಿಯಾಗಿ 7ನೇನೆಬಿಸತ್ ರಿಝ್ವಾನ, ನೀರಾವರಿ ಮಂತ್ರಿಯಾಗಿ ಚಿತ್ರಾಕ್ಷ , ಸ್ವಚ್ಛತಾ ಮಂತ್ರಿಯಾಗಿ ಗಾನಶ್ರಿ, ವಾರ್ತಾ ಮಂತ್ರಿಯಾಗಿ ಮುಹಾಝ್ ರವರನ್ನು ಆಯ್ಕೆ ಮಾಡಲಾಯಿತು. ಮತದಾನ ಅಧಿಕಾರಿಗಳಾಗಿ ಮುಖ್ಯಗುರು ಜಾನಕಿ, ಸಹ ಶಿಕ್ಷಕಿಯರಾದ ವೇದಾವತಿ.ಪಿ, ಜಯಪ್ರಬಾ ಹಾಗೂ ಅಥಿತಿ ಶಿಕ್ಷಕಿಯಾದ ದಿವ್ಯಾ. ಕೆ, ನಯನ್ ಕುಮಾರ್ ಕರ್ತವ್ಯ ನಿರ್ವಹಿಸಿದರು.

LEAVE A REPLY

Please enter your comment!
Please enter your name here