





ಪುತ್ತೂರು: ವರ್ಷಿಣಿ ಯೋಗ ಶಿಕ್ಷಣ, ಸಾಂಸ್ಕೃತಿಕ ಮತ್ತು ಕ್ರೀಡಾ ಟ್ರಸ್ಟ್ (ರಿ.) ಕಲಾ ಯೋಗಾಸನ ಸ್ಪೋರ್ಟ್ಸ್ ಮತ್ತು ಸಾಂಸ್ಕೃತಿಕ ಅಕಾಡೆಮಿ, ತುಮಕೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತುಮಕೂರು ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಅಂಗವಾಗಿ 8ನೇ ವರ್ಷದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯು ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣ ತುಮಕೂರಿನಲ್ಲಿ ನ.02ರಂದು ಆಯೋಜಿಸಲಾಗಿತ್ತು. 10 ರಿಂದ 18 ವರ್ಷದ ಒಳಗಿನ ಬಾಲಕಿಯರ ಫಾರ್ವಡ್ ಬೆಂಡಿಂಗ್ ವಿಭಾಗದಲ್ಲಿ ಆರಾಧ್ಯ ರೈ ಪ್ರಥಮ ಸ್ಥಾನ ಮತ್ತು ಟ್ವಿಸ್ಟಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.


ಆರಾಧ್ಯ ರೈ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ನೆಲ್ಯಾಡಿಯ 6ನೇ ತರಗತಿ ವಿದ್ಯಾರ್ಥಿನಿ. ಇವರು ಪುತ್ತೂರು ತಾಲೂಕಿನ ಕೈಕಾರ ತೊಟ್ಲ ನಿವಾಸಿ ಅವಿನಾಶ್ ರೈ ಮತ್ತು ಸಂಧ್ಯಾ ರೈ ರವರ ಪುತ್ರಿ. ನಿರಂತರ ಯೋಗ ಕೇಂದ್ರ ಸುಳ್ಯದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.















