ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಿರಣ್ರಾಜ್ರವರು ಮೇ.31 ರಂದು ಕರ್ತವ್ಯದಿಂದ ನಿವೃತ್ತಿಗೊಂಡಿದ್ದಾರೆ.
ಸುಳ್ಯ ತಾಲೂಕು ಅಮರಪಡ್ನೂರು ಗ್ರಾಮದ ಸಂಕೇಶ ಎಂಬಲ್ಲಿ ಪುತ್ರ ಮತ್ತು ಕುಸುಮರವರ ಪುತ್ರರಾಗಿ ಸಂಕೇಶ ಎಂಬಲ್ಲಿ 20 ಮೇ 1963 ರಲ್ಲಿ ಜನಿಸಿದ ಇವರು ಕುಕ್ಕುಜಡ್ಕ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಸುಬ್ರಹ್ಮಣ್ಯ ಸುಬ್ರಹ್ಮಣೇಶ್ವರ ಪದವಿ ಪೂರ್ವ ಕಾಲೇಜ್ನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು ಮಂಗಳೂರಿನ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ವ್ಯಕ್ತಿಪರ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ.
22 ಜನವರಿ 1986ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೂಮಡ್ಡ ಇಲ್ಲಿ ಸಹಶಿಕ್ಷಕರಾಗಿ ಸೇವೆ ಆರಂಭಿಸಿ, 5 ಜೂನ್ 1993 ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದರ್ಬೆತ್ತಡ್ಕಕ್ಕೆ ವರ್ಗಾವಣೆಗೊಂಡು ಅಲ್ಲಿ 6 ವರ್ಷಗಳ ಕಾಲ ಕರ್ತವ್ಯ, 31 ಮಾರ್ಚ್ 1999 ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರಿಯ ಇಲ್ಲಿಗೆ ವರ್ಗಾವಣೆಗೊಂಡು 20 ವರ್ಷಗಳ ಕಾಲ ಸುದೀರ್ಘ ಸೇವೆಯ ಬಳಿಕ 2016 ರಲ್ಲಿ ಸ.ಹಿ.ಪ್ರಾ ಶಾಲೆ ತೆಗ್ಗು ಇಲ್ಲಿಗೆ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸಿ ನಂತರ 4 ಜೂನ್ 2019ರಲ್ಲಿ ತೆಗ್ಗು ಶಾಲೆಗೆ ಖಾಯಂ ಶಿಕ್ಷಕರಾಗಿ ವರ್ಗಾವಣೆಗೊಂಡು 31 ಮೇ 2023ರವರೆಗೆ 7 ವರ್ಷಗಳ ತನಕ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಒಟ್ಟು 37 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಪ್ರಸ್ತುತ ಪತ್ನಿ ಸಂಗೀತರಾಜ್, ಪುತ್ರರಾದ ಸಮಿತ್ರಾಜ್ ಮತ್ತು ಸುಜಿತ್ರಾಜ್ರವರೊಂದಿಗೆ ಪರ್ಪುಂಜದ ಸಂಕೇಶ್ ನಿಲಯದಲ್ಲಿ ಸುಖೀ ಜೀವನ ನಡೆಸುತ್ತಿದ್ದಾರೆ.