ಪುತ್ತೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಚುನಾವಣೆ ನಡೆಯಿತು.
ಪ್ರೌಢ ಶಾಲಾ ವಿಭಾಗದ ನಾಯಕನಾಗಿ 10ನೇ ತರಗತಿಯ ಪ್ರಮಥ ಎಂ ಭಟ್ ಹಾಗೂ ಉಪನಾಯಕನಾಗಿ 9ನೇ ತರಗತಿಯ ಎಸ್ ಕಿಶನ್ ಪ್ರಭು ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಾಯಕನಾಗಿ 7ನೇ ತರಗತಿಯ ವೈಭವ ಕಾಮತ್ ಹಾಗೂ ಉಪನಾಯಕಿಯಾಗಿ 6ನೇ ತರಗತಿಯ ಕುಮಾರಿ ಸಾನ್ವಿ ಆನಂದ್ ಆಯ್ಕೆಯಾದರು. ವಿರೋಧ ಪಕ್ಷದ ನಾಯಕರಾಗಿ 10ನೇ ತರಗತಿಯ ವಿಶ್ರುತ್ ರೈ , ಗೃಹಮಂತ್ರಿಯಾಗಿ ಸಮೃದ್ಧಿ ಶೆಟ್ಟಿ, ಸಹಾಯಕ ಗೃಹ ಮಂತ್ರಿಯಾಗಿ ಸಾರ್ಥಕ್ ಕೆ ಸಿ, ಆರೋಗ್ಯ ಮಂತ್ರಿಯಾಗಿ ಅಜೇಯರಾಮ್ ಉಪ ಆರೋಗ್ಯ ಮಂತ್ರಿಯಾಗಿ ಆಕಾಶ್ ಪ್ರಭು, ಸಾಂಸ್ಕೃತಿಕ ಮಂತ್ರಿಯಾಗಿ ಸಾನ್ವಿ ಎಸ್ ಪಿ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಈಶನ್, ಕೃಷಿ ಮತ್ತು ನೀರಾವರಿ ಮಂತ್ರಿಯಾಗಿ ಸಹನಾ ಮಳಿ, ಉಪ ಕೃಷಿ ಮತ್ತು ನೀರಾವರಿ ಮಂತ್ರಿಯಾಗಿ ಅರ್ಜುನ್, ಕ್ರೀಡಾ ಮಂತ್ರಿಯಾಗಿ ಸಾತ್ವಿಕ್ ಆರ್. ಸಿ, ಉಪ ಕ್ರೀಡಾ ಮಂತ್ರಿಯಾಗಿ ಕೃತಿ, ಆಹಾರ ಮಂತ್ರಿಯಾಗಿ ಶ್ರೀಯಾ, ಉಪ ಆಹಾರ ಮಂತ್ರಿಯಾಗಿ ಶಾಂಭವಿ, ವಾರ್ತಾ ಮಂತ್ರಿಯಾಗಿ ಡಿಂಪಲ್ ಶೆಟ್ಟಿ, ಉಪ ವಾರ್ತಾ ಮಂತ್ರಿಯಾಗಿ ಶಮನ್ ಎನ್, ಕಾನೂನು ಮಂತ್ರಿಯಾಗಿ ಅನ್ನಿಕಾ, ಉಪ ಕಾನೂನು ಮಂತ್ರಿಯಾಗಿ ಕನ್ನಿಕಾ ಆಯ್ಕೆಯಾದರು.
ಸಭಾಪತಿ ಸ್ಥಾನಕ್ಕೆ ಸಾಕ್ಷಿ ಆಯ್ಕೆಯಾದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಮಾರ್ಗದರ್ಶನದಲ್ಲಿ ಶಾಲಾ ಹಿರಿಯ ಶಿಕ್ಷಕರಾದ ರಾಧಾಕೃಷ್ಣ ರೈ ಮತ್ತು ಭಾಸ್ಕರ ಗೌಡ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶಾಲೆಯ ಶಿಕ್ಷಕ ಶಿಕ್ಷಕೇತರ ವೃಂದದವರು ಸಹಕರಿಸಿದರು.