ಪುತ್ತೂರು: ಜೂ.30ರಂದು ನಿವೃತ್ತರಾಗಲಿರುವ ಇರ್ದೆ-ಉಪ್ಪಳಿಗೆ ಪ್ರೌಢಶಾಲಾ ಮುಖ್ಯಗುರು ನಾರಾಯಣ ಕೆ.ಯವರು ಬೀಳ್ಕೊಡುಗೆ ಸಮಾರಂಭ ಸಾಧನಾಭಿವಂದನಾ ಕಾರ್ಯಕ್ರಮದ ಪೂರ್ವಬಾವಿ ಸಭೆ ಹಾಗೂ ಆಮಂತ್ರಣ ಬಿಡುಗಡೆಯು ಜೂ.24ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಅಭಿನಂದನಾ ಸಮಾರಂಭದ ಪ್ರಾರಂಭದಲ್ಲಿ ಉಪ್ಪಳಿಗೆ ಜಂಕ್ಷನ್ ನಲ್ಲಿ ಸ್ವಾಗತಿಸಿ, ಮೆರವಣಿಗೆ ಮೂಲಕ ಕರೆತರಲಾಗುವುದು. ಬಳಿಕ ಶಾಲಾ ನೂತನ ಕಟ್ಟಡದ ಉದ್ಘಾಟನೆ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ನಡೆಸಲಾಗುವುದು. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಾರಾಯಣ ರವರಿಗೆ ಅದ್ದೂರಿ ಸನ್ಮಾನ, ಅಭಿನಂದನೆ ಹಾಗೂ 2022-23ಸಾಲಿನಲ್ಲಿ ಶೇ.100 ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಭಿನಂದನಾ ಸಮಿತಿ ಅಧ್ಯಕ್ಷ ಮನಮೋಹನ ರೈ ಬಿಡುಗಡೆಗೊಳಿಸಿದರು.ಎಸ್ ಡಿ ಎಂ ಸಿ ಕಾರ್ಯಾಧ್ಯಾಕ್ಷ ಪ್ರಕಾಶ್ ರೈ ಬೈಲಾಡಿ, ಅಭಿನಂದನಾ ಸಮಿತಿ ಸಂಚಾಲಕ ಚಿದಾನಂದ ಬೈಲಾಡಿ, ಉಪಾಧ್ಯಕ್ಷ ಮಂಜುನಾಥ ಎನ್.ಎಸ್., ಸುಶಾಂತ್ ಅಜ್ಜಿಕಲ್ಲು, ಕೋಶಾಧಿಕಾರಿ ತ್ಯಾಂಪಣ್ಣ ಶೆಟ್ಟಿ, ಸದಸ್ಯರಾದ ಮೀನಾಕ್ಷಿ ಮಂಜುನಾಥ, ಚೋಮ ನಾಯ್ಕ ಕೈಕಾರ, ಉಮಾವತಿ ಸುಬ್ಬಪ್ಪ ಮಣಿಯಾಣಿ, ಸೀತಾರಾಮ ಮಿತ್ತಡ್ಕ, ದುರ್ಗಾಂಬಿಕಾ ಆಳ್ವ, ರತ್ನಕುಮಾರಿ, ಶಿಕ್ಷಕರಾದ ವಿದ್ಯಾಲಕ್ಷ್ಮೀ ಹಾಗೂ ಸವಿತಾ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕರಾದ ರಾಮಚಂದ್ರ ಸ್ವಾಗತಿಸಿ, ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು.