ಕಾಣಿಯೂರು: ತಖ್ವಿಯತುಲ್ ಇಸ್ಲಾಂ ಮದ್ರಸ ಬೆಳಂದೂರು ಪಳ್ಳತ್ತಾರು ಎಸ್.ಬಿ.ಎಸ್ ನ ವಾರ್ಷಿಕ ಮಹಾಸಭೆಯು ಖತೀಬ್ ಉಸ್ತಾದ್ ಮುಹಮ್ಮದ್ ಮುಸ್ತಾಕ್ ಕಾಮಿಲ್ ಸಖಾಫಿ ಯವರ ದುಆ ಮೂಲಕ ಪ್ರಾರಂಭಗೊಂಡು ಮುಹಮ್ಮದ್ ಹಿಶಾಂ ದರ್ಖಾಸ್ ವಾರ್ಷಿಕ ವರದಿಯನ್ನು ವಾಚಿಸಿದರು. ನೂತನ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಪರಾಝ್ ಬನಾರಿ, ಉಪಾಧ್ಯಕ್ಷರಾಗಿ ಸಯ್ಯದ್ ಮುಹಮ್ಮದ್ ಸ್ವಾದಿಖ್ ದರ್ಖಾಸ್, ಸಿಯಾನ್ ಬೊಳ್ಯಮೂಲೆ, ಮುಹಮ್ಮದ್ ಹಿಶಾಂ ದರ್ಖಾಸ್,
ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಪಾಝಿಲ್ ಬನಾರಿ,ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ರಾಶಿದ್ ಪುಳಿತ್ತಡಿ, ಮುಹಮ್ಮದ್ ರಿಜ್ವಾನ್ ಪಳ್ಳತ್ತಾರು ಮತ್ತು ಕೊಶಾಧಿಕಾರಿಯಾಗಿ ಲುತಾಫ್ ಕೂಂಕ್ಯ ಆಯ್ಕೆಗೊಂಡರು.
ಸದಸ್ಯರಾಗಿ ಮುಹಮ್ಮದ್ ಹಸೀಬ್, ಮುಹಮ್ಮದ್ ಉವೈಸ್, ಮುಹಮ್ಮದ್ ಅನಸ್ ಗುಂಡಿನಾರು ಹಾಗೂ ಮದ್ರಸದ ಲೀಡರಾಗಿ ಬಿ.ಎಮ್ ಮುಹಮ್ಮದ್ ರಿಝ್ವಾನ್ ಪಳ್ಳತ್ತಾರು ಆಯ್ಕೆ ಗೊಂಡರು. ಮುದಬ್ಬಿರಾಗಿ ಅಬ್ದುಲ್ ಜಲೀಲ್ ಮುಈನಿ ಪಣೆಮಜಲು ನಿರ್ದೇಶಕರಾಗಿ ಮುಹಮ್ಮದ್ ಮುಸ್ತಾಕ್ ಕಾಮಿಲ್ ಸಖಾಫಿ ಗೂಡಿನಬಳಿ, ಹಸನ್ ಝುಹುರಿ ಎಣ್ಮೂರು, ಶಿಹಾಬುದ್ದೀನ್ ಫಾಳಿಲಿ ಪೈಂಬಚ್ಚಾಲ್ ರನ್ನು ನೇಮಕ ಮಾಡಲಾಯಿತು. ಮುಹಮ್ಮದ್ ರಾಶಿದ್ ಪುಳಿತ್ತಡಿ ಸ್ವಾಗತಿಸಿ, ಪಾಝಿಲ್ ಬನಾರಿ ವಂದಿಸಿದರು.