





ಉಪ್ಪಿನಂಗಡಿ : ಇಲ್ಲಿನ ಪುರಾಣ ಪ್ರಸಿದ್ದ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಬುಧವಾರ ರಾತ್ರಿ ಲಕ್ಷದೀಪೋತ್ಸವ ಕಾರ್ಯಕ್ರಮ ಶ್ರದ್ದಾಭಕ್ತಿಯೊಂದಿಗೆ ನೆರವೇರಿತು.
ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ಉಪಸ್ಥಿತಿಯಲ್ಲಿ ವೇದಮೂರ್ತಿ ಅನಂತ ಬಳ್ಳಕ್ಕುರಾಯ ಬಲಿ ಉತ್ಸವದ ವಿಧಿ ವಿಧಾನಗಳನ್ನು ನೆರವೇರಿಸಿದರು. ಲಕ್ಷ ದೀಪೋತ್ಸವ , ಹಾಗೂ ವಸಂತ ಕಟ್ಟೆ ಪೂಜೆ ನೆರವೇರಿ ಮಹಾಪೂಜೆಯು ಜರಗಿತು.


ಈ ಸಂಧರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾೖಕ್, ವೆಂಕಪ್ಪ ಪೂಜಾರಿ , ಡಾ ರಮ್ಯ ರಾಜಾರಾಂ , ಕೃಷ್ಣರಾವ್ ಅರ್ತಿಲ, ಕಾರ್ಯನಿರ್ವಹಣಾಧಿಕಾರಿ ಕವಿತಾ ಪಿ, ಪ್ರಮುಖರಾದ ಕರುಣಾಕರ ಸುವರ್ಣ , ಡಾ ರಾಜಾರಾಮ್ ಕೆ ಬಿ , ಹರಿರಾಮಚಂದ್ರ, ಕಂಗ್ವೆ ವಿಶ್ವನಾಥ ಶೆಟ್ಟಿ, ಯು ರಾಮ , ಜ್ಯೋತಿ ಹೇರಂಭ ಶಾಸ್ತ್ರಿ, ಶ್ರೀನಿಧಿ ಉಪಾಧ್ಯಾಯ, ದಯಾನಂದ , ಜೀವನ್ ಗಾಣಿಗ, ಮಹಾಲಿಂಗ , ಶರತ್ ಕೋಟೆ, ಪ್ರಶಾಂತ್ ನೆಕ್ಕಿಲಾಡಿ, ಕರಾಯ ರಾಘವೇಂದ್ರ ನಾಯಕ್, ಹರೀಶ್ ಆಚಾರ್ಯ ಪಿ , ಯು ರಾಜೇಶ್ ಪೈ, ರವೀಂದ್ರ ಭಟ್, ಪ್ರತೀಕ್ಷಾ ಶೆಣೈ, ಭಾರತಿ, ಕಾರ್ತಿಕ್, ಸಂತೋಷ್ ಎನ್ , ಜಿತೇಶ್ ಶೆಟ್ಟಿ, ಬ್ರಿಜೇಶ್ ಎಂ ಎನ್ , ಕೌಶಿಕ್ ಎನ್ , ಅವಿನಾಶ್, ವೈ ವೆಂಕಟೇಶ್ ಶೆಣೈ , ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು.





ದೇವಳದ ವ್ಯವಸ್ಥಾಪಕರಾದ ವೆಂಕಟೇಶ್ ರಾವ್, ಪದ್ಮಾನಾಭ ಕುಲಾಲ್, ಕೃಷ್ಣ ಪ್ರಸಾದ್ , ದಿವಾಕರ, ಸುಧಾಕರ ಶೆಟ್ಟಿ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.










