ಪುತ್ತೂರು: ಕೂಡುರಸ್ತೆ ಸಮಸ್ತ ಕೇರಳ ಜಂ – ಇಯ್ಯತುಲ್ ಉಲಮಾ ಸಂಘಟನೆಯ 97 ನೇ ಸ್ಥಾಪನಾ ದಿನದ ಅಂಗದ ನಿಮಿತ್ತ ಧ್ವಜಾರೋಹಣ ಹಾಗು ಸಮಸ್ತ ಸಂದೇಶ ಕಾರ್ಯಕ್ರಮ ನಡೆಯಿತು.
ರಿಫಾಯಿಯ್ಯ ಮದ್ರಸ ಕೂಡುರಸ್ತೆ ಸಭಾಂಗಣದಲ್ಲಿ ಜಮಾಅತ್ ಗೌರವಾದ್ಯಕ್ಷ ಮಾಹಿನ್ ಹಾಜಿ ಬಾಳಾಯ ಧ್ವಜಾರೋಹಣಗೈದರು. ಖತೀಬ ಬದ್ರುದ್ದೀನ್ ರಹ್ಮಾನಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ ಸಮಸ್ತ ನಡೆದು ಬಂದ ಹಾದಿಯನ್ನು ವಿವರಿಸಿದರು.
ಅಬ್ದುಲ್ ಮಜೀದ್ ಬಾಳಾಯ ಮಾತನಾಡಿ ಸತ್ಯ ಪಥದ ಮನೋಹರವಾದ ದಾರಿಯಾಗಿದೆ ಸಮಸ್ತ , ಪವಿತ್ರವಾದ ಇಸ್ಲಾಮಿನ ಸಂದೇಶವನ್ನು ಈ ಭಾಗದಲ್ಲಿ ಪರಿಚಯಿಸಿದ್ದು ಸಮಸ್ತವಾಗಿದೆ . ಪುಣ್ಯ ಸಮಸ್ತದೊಂದಿಗೆ ಈ ದೀನಿ ಚೈತನ್ಯವನ್ನು ಮತ್ತಷ್ಟು ಬೆಳೆಸುವಂತೆ ಕರೆ ನೀಡಿದರು.
ಜಮಾಅತ್ ಅದ್ಯಕ್ಷ ಉಮ್ಮರ್ ಅಝ್ ಹರಿ ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ್ದರು , ಸಭೆಯಲ್ಲಿ ಜಮಾಅತ್ ಉಪಾದ್ಯಕ್ಷ ಉಮರ್ , ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ , ಮದ್ರಸ ಉಸ್ತಾದ್ ಇಕ್ಬಾಲ್ ಮುಸ್ಲಿಯಾರ್ , ನೌಷಾದ್ ಕಳಂಜ , ಇಸ್ಮಾಯಿಲ್ ( ಪುತ್ತು ) , ಅಬೂಬಕರ್ ಕೂಡುರಸ್ತೆ , ಅಸ್ರಫ್ . ಬಿ. ಟಿ. , ಅಬ್ದುಲ್ ಕಾದರ್ ಅಜ್ಜಿಕಲ್ಲು , ಹಾಗು ಎಸ್ಕೆಎಸ್ಸೆಸೆಫ್ ಪ್ರಮುಖರಾದ ಮಹಮ್ಮದ್ ಅಝರುದ್ದೀನ್ , ನೌಫಲ್ ಅಜ್ಜಿಕಲ್ಲು , ಮಹಮ್ಮದ್ ಹನೀಫ್ ದರ್ಬೆ , ಮಹಮ್ಮದ್ ನಿಝಾಮ್ , ಹುಸೈನ್ , ಸಲೀತ್ ಕೂಡುರಸ್ತೆ ಉಪಸ್ಥಿತರಿದ್ದರು.