ವಿವೇಕಾನಂದ ಕಾಲೇಜಿನಲ್ಲಿ “ಪಥ” ಕಿರುಚಿತ್ರ ಬಿಡುಗಡೆ

0

ಅವಕಾಶಗಳನ್ನು ಸದುಪಯೋಗಿಸಿಕೊಳ್ಳಬೇಕು- ರೂಪೇಶ್ ಶೆಟ್ಟಿ


ಪುತ್ತೂರು:ಪ್ರಸ್ತುತ ದಿನಗಳಿಗೆ ಹೋಲಿಸಿದರೆ ಅಂದಿನ ಕಾಲಘಟ್ಟದ ವಿದ್ಯಾರ್ಥಿಗಳಿಗೆ ಅವಕಾಶಗಳು ಇರಲಿಲ್ಲ.ಆದರೆ ಈಗ ವಿದ್ಯಾರ್ಜನೆಗೈಯುವ ವಿದ್ಯಾರ್ಥಿಗಳು ಓಡುತ್ತಿರುವ ಕಾಲದ ಜೊತೆ ಸೇರಿಕೊಂಡಿದ್ದಾರೆ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ವಿಪುಲವಾದ ಅವಕಾಶಗಳಿವೆ. ಹಾಗಾಗಿ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪಥ ದಂತಹ ಒಳ್ಳೆಯ ಕಥೆಗಳು, ಕಿರುಚಿತ್ರಗಳು ಇನ್ನೂ ಹೆಚ್ಚು ಮೂಡಿಬರಲಿ ಎಂದು ಖ್ಯಾತ ನಟ, ರೂಪೇಶ್ ಶೆಟ್ಟಿ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನ(ಸ್ವಾಯತ್ತ) ಐಕ್ಯೂಎಸಿ ಹಾಗೂ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ “ಪಥ”ಕನ್ನಡ ಕಿರು ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಉದ್ಘಾಟಕರಾಗಿ ಮಾತನಾಡಿದರು.


ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಳುನಾಡಿನ ಖ್ಯಾತ ಹಾಸ್ಯ ನಟ, ಕಾಂತಾರ ಖ್ಯಾತಿಯ ದೀಪಕ್ ರೈ ಪಾಣಾಜೆ ಮಾತನಾಡಿ, ವಿವೇಕಾನಂದ ಕಾಲೇಜು
ಪಠ್ಯದ ಜೊತೆಗೆ ಪಠ್ಯತರ ಕಾರ್ಯಗಳಿಗೆ ಬೆನ್ನೆಲುಬಾಗಿದೆ.ಮಕ್ಕಳು ಓದುವುದರ ಜೊತೆಗೆ ತಮಗೆ ಯಾವ ವಿಷಯದಲ್ಲಿ ಆಸಕ್ತಿ ಇವೆಯೋ ಅದರಲ್ಲಿ ಭಾಗವಹಿಸುವಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಮಾತನಾಡಿ, ಮಕ್ಕಳ ಬೆಳವಣಿಗೆ ನಮ್ಮ ಸಹಕಾರ ಎಂದಿಗೂ ಇದ್ದೇ ಇರುತ್ತದೆ.ಶಿಕ್ಷಣದ ಜೊತೆಗೆ ಇತರ ಚಟುವಟಿಕೆಗಳೂ ಅಗತ್ಯ. ವಿದ್ಯಾರ್ಥಿ ಗಳ ಕೀರ್ತಿ ಉತ್ತುಂಗಕ್ಕೇರಲಿ ಎಂದು ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ ಎನ್ ಶುಭ ಹಾರೈಸಿದರು.


ಪಥ ಕಿರುಚಿತ್ರವು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಅಚಲ್ ಉಬರಡ್ಕ ನಿರ್ದೇಶಿಸಿ, ಯೋಶಿತ್ ಬನ್ನೂರು ಛಾಯಾಗ್ರಹಣ ಹಾಗೂ
ಸಂಕಲನವನ್ನು ನಮನ್ ಶೆಟ್ಟಿ ಮಾಡಿದ್ದಾರೆ. ಅಶ್ವಿನ್ ಬಾಬಣ್ಣ ಸಂಗೀತ ನಿರ್ದೇಶನ ಮಾಡಿರುತ್ತಾರೆ. ಪಥ ಕಿರು ಚಿತ್ರದ ನಾಯಕನಾಗಿ ಅಚಲ್ ಉಬರಡ್ಕ ಮತ್ತು
ನಾಯಕಿಯಾಗಿ ವಿಷ್ರಿತ ಆಚಾರ್ಯರವರು ಅಭಿನಯಿಸಿದ್ದಾರೆ ಹಾಗೂ ಶರತ್ ಕೆ ಎನ್,ಸ್ವಸ್ತಿಕ್ ಶೆಟ್ಟಿ, ಅರಹಂತ್ ಜೈನ್, ಗಗನ್ ದೀಪ್, ಮಂಜುನಾಥ್ ಜೋಡುಕಲ್ಲು,
ಸುರಕ್ಷಾ ಮುಂತಾದವರು ಅಭಿನಯಿಸಿದ್ದಾರೆ.


ವೇದಿಕೆಯಲ್ಲಿ ಪುತ್ತೂರಿನ ಕಹಳೆ ನ್ಯೂಸ್ ನ ಮುಖ್ಯ ಸಂಪಾದಕ ಶ್ಯಾಮ ಸುದರ್ಶನ್ ಹೊಸಮೂಲೆ, ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ್ ಹೆಚ್ ಜಿ,ವಿಶೇಷ ಅಧಿಕಾರಿ ಶ್ರೀಧರ್ ನಾಯ್ಕ್ ಭಟ್ ಉಪಸ್ಥಿತರಿದ್ದರು.ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ ಆರ್ ನಿಡ್ಪಳ್ಳಿ ಪ್ರಸ್ತಾವಿಸಿ ಸ್ವಾಗತಿಸಿದರು.,ವಿದ್ಯಾರ್ಥಿ ಮಂಜುನಾಥ್ ಜೋಡುಕಲ್ಲು ವಂದಿಸಿ,ಹರಿಪ್ರಸಾದ್ ನಿರೂಪಿಸಿದರು.

ಒಂದು ಬಾರಿ ಸೋತರೂ ಪುನಃ ಗೆಲ್ಲುವೆ ಎಂಬ ಛಲವಿದ್ದರೆ ಸಾಧನೆ ಸಾಧ್ಯ. ತಾವು ಬರೆದಂತಹ ಒಂದು ಸಣ್ಣ ಕಥೆ ನೋಡುಗರಿಗೆ,ಕೇಳುಗರಿಗೆ ಇಷ್ಟವಾದರೆ ಸಾಕು ನಾವು ಗೆದ್ದಂತೆ.ಪಥ ಕಿರು ಚಿತ್ರವು ಇನ್ನೂ ಉನ್ನತಿ ಕಾಣಲಿ ಎಂದು ನಟ ಅನುರಾಜ್ ಹಾರೈಸಿದರು.ಪಥ ಚಿತ್ರ ಬಿಡುಗಡೆಗೆ ಮುನ್ನವೇ ರಾಜ್ಯಮಟ್ಟದ ಉತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ಪಡೆದುಕೊಂಡಿರುವುದು

LEAVE A REPLY

Please enter your comment!
Please enter your name here