ಪುತ್ತೂರು: ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಜೂನ್ 27 ರಿಂದ ಜುಲೈ 17ನೇ ವರೆಗೆ ನಡೆಯಲಿರುವ ಜಾಗತಿಕ ಮಟ್ಟದ ಆಹ್ವಾನಿತರ ಕೂಟ ಮತ್ತು ಅಂತಾರಾಷ್ಟ್ರೀಯ “ಹಿಪ್ ಹಾಪ್” ಡಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಈಶಾನ್ ಆಯ್ಕೆಯಾಗಿದ್ದಾರೆ. ಜೂನ್ 27ರಂದು ಭಾಗವಹಿಸಲು ಫ್ರಾನ್ಸ್ ಗೆ ತೆರಳಿದ್ದಾರೆ.
Lock is not Joke ಎಂಬ ಅಂತಾರಾಷ್ಟ್ರೀಯ ಖ್ಯಾತಿಯ ಡಾನ್ಸ್ ಅಸೋಸಿಯನ್ ವತಿಯಿಂದ ಆಯೋಜಿಸಲ್ಪಡುವ ಈ ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ 40ದೇಶಗಳಿಂದ ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಭಾರತದಿಂದ ಭಾಗವಹಿಸುತ್ತಿರುವ ಏಕೈಕ ಸ್ಪರ್ಧಿ ಈಶಾನ್, ಪಡೀಲ್ ನಿವಾಸಿ ಆರ್ಕಿಟೆಕ್ಟ್ ಇಂಜಿನಿಯರ್ ಶ್ರೀ ರಾಮಕೃಷ್ಣ ಭಟ್ ಮತ್ತು ಶ್ರೀಮತಿ ದಿವ್ಯಲಕ್ಷ್ಮೀ ದಂಪತಿಗಳ ಪುತ್ರ.
ಅಂತಾರಾಷ್ಟ್ರೀಯ “ಹಿಪ್ ಹಾಪ್” ಡಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಈಶಾನ್ ಗೆ ಶಾಲಾ ಆಡಳಿತ ಮಂಡಳಿ, ರಕ್ಷಕ-ಶಿಕ್ಷಕ ಸಂಘ, ಮುಖ್ಯೋಪಾಧ್ಯಾಯರು ಮತ್ತು ಶಾಲಾ ಶಿಕ್ಷಕರ ತಂಡ ಶುಭ ಹಾರೈಸಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.