





ಪುತ್ತೂರು: ಡಾ. ಪೃಥ್ವಿಸಾಗರ್ ಕೆ.ಎಸ್. ನಿಟ್ಟೆ ವಿಶ್ವವಿದ್ಯಾಲಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ, ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ), ಮಂಗಳೂರು, ಇಲ್ಲಿ ಡಾ.ಕೃಷ್ಣ ಕುಮಾರ್ ಬಿ. ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “Investigating the role of Vibrio parahacemolytics Type VI Secretion System (T6SS) in survival and ecological adaption” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ)ದ 15ನೇ ಘಟಿಕೋತ್ಸವದಲ್ಲಿ Doctor of Philosophy (PhD) ಪದವಿಯನ್ನು ಗಳಿಸಿರುತ್ತಾರೆ.


ಇವರು ಮೂಲತಃ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಕಟ್ಟಪುಣಿ ನಿವಾಸಿ, ಪ್ರಸ್ತುತ ಪುತ್ತೂರಿನ ಮುಕ್ರಂಪಾಡಿ ಅಪೂರ್ವ ಬಡಾವಣೆಯಲ್ಲಿ ವಾಸಿಸುತ್ತಿರುವ ಮಾಜಿ ಸೈನಿಕ ಸುರೇಶ ಕೆ.ಯು. ಮತ್ತು ನಿವೃತ್ತ ಪ್ರೌಢ ಶಾಲಾ ಶಿಕ್ಷಕಿ ಮೀನಾಕ್ಷಿ ಬೊಳುಗಲ್ಲು ದಂಪತಿಯರ ಪುತ್ರ.





ಪೃಥ್ವಿಸಾಗರ್ ಕೆ.ಎಸ್. ಪ್ರಾಥಮಿಕ ಶಿಕ್ಷಣವನ್ನು ಸ.ಕಿ.ಪ್ರಾ. ಶಾಲೆ ಪುತ್ಯ. ಸ. ಹಿ. ಪ್ರಾ. ಶಾಲೆ ಮಂಡೆಕೋಲು, ಸುಳ್ಯ ಹಾಗೂ ಲಿಟ್ಸ್ ಫ್ಲವರ್ ಹಿ. ಪ್ರಾ. ಶಾಲೆ ದರ್ಬೆ, ಪುತ್ತೂರು, ಪ್ರೌಢ ಶಿಕ್ಷಣವನ್ನು ವಿವೇಕಾನಂದ ಅಂಗ್ಲ ಮಾಧ್ಯಮ ಪ್ರೌಢ ಶಾಲೆ ತೆಂಕಿಲ, ಪದವಿ ಪೂರ್ವ ಶಿಕ್ಷಣವನ್ನು ವಿವೇಕಾನಂದ ಪದವಿ ಪೂರ್ವ ಕಾಲೇಜು, ನೆಹರೂ ನಗರ, ಪದವಿ ಶಿಕ್ಷಣವನ್ನು ಮೀನುಗಾರಿಕಾ ಮಹಾವಿದ್ಯಾಲಯ (ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ), ಎಕ್ಕೂರು ಹಾಗೂ ಸ್ನಾತಕೋತ್ತರ ಪದವಿಯನ್ನು ನಿಟ್ಟೆ ವಿಶ್ವವಿದ್ಯಾಲಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ, ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ), ದೇರಳಕಟ್ಟೆಯಲ್ಲಿ ಪಡೆದಿರುತ್ತಾರೆ.
ಪ್ರಸ್ತುತ ಇವರು Principal Project Associate ಆಗಿ DST-Technology Enabling Centre, ನಿಟ್ಟೆ ( ಪರಿಗಣಿತ ವಿಶ್ವವಿದ್ಯಾಲಯ), ದೇರಳಕಟ್ಟೆ, ಮಂಗಳೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.









