





ನೆಲ್ಯಾಡಿ: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾದ ಡಿ.ಹರ್ಷೇಂದ್ರ ಕುಮಾರ್, ಆಡಳಿತ ಮಂಡಳಿಯ ಕಾರ್ಯದರ್ಶಿ ಎಸ್. ಸತೀಶ್ಚಂದ್ರ ಮತ್ತು ಮಕ್ಕಳ ಕ್ಷೇಮಪಾಲನಾ ಅಧಿಕಾರಿ ಸೋಮಶೇಖರ್ ಶೆಟ್ಟಿಯವರು ಭೇಟಿ ನೀಡಿದರು.



ಶಾಲೆಯ ಮುಖ್ಯೋಪಾಧ್ಯಾಯ ಎ.ಲಕ್ಷ್ಮಣ ಗೌಡ, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೂಗುಚ್ಚ ನೀಡಿ ಶಾಲೆಗೆ ಬರಮಾಡಿಕೊಂಡರು. ಬಳಿಕ ಶಾಲೆಯ ಭೌತಿಕ ವ್ಯವಸ್ಥೆಗಳನ್ನು ಕಂಡು ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಹೆಚ್ಚಾಗಿರುವುದರಿಂದ ಹೊಸ ಕಟ್ಟದ ನಿರ್ಮಾಣ ಬಗ್ಗೆ ಪ್ರಸ್ತಾವನೆಗೈದರು. ಪ್ರಸುತ್ತ ವಿದ್ಯಾರ್ಥಿಗಳ ದಾಖಲಾತಿ ಕುರಿತು ಶಿಕ್ಷಕರನ್ನು ಪ್ರಶಂಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಅಗತ್ಯತೆಗಳನ್ನು ಪೂರೈಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುಪ್ರೀತಾ ಕುಳ್ಳಾಜೆ, ವಿದ್ಯಾಭಿಮಾನಿ ಶಂಕರನಾರಾಯಣ ನಾಯಕ್ ಉಪಸ್ಥಿತರಿದ್ದರ











