ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಮಹಾಸಭೆ

0

ವಾರ್ಷಿಕ 40 ಲಕ್ಷ ವ್ಯವಹಾರ 1.10 ಲಕ್ಷ ಲಾಭ


ಪುತ್ತೂರು: ಒಳಮೊಗ್ರು ಹಾ.ಉ. ಸಹಕಾರಿ ಸಂಘದ ಸಾಮಾನ್ಯ ಮಹಾಸಭೆಯು ಸಂಘದ ಅಧ್ಯಕ್ಷ ಎ ರಕ್ಷಿತ್ ರೈ ಮುಗೇರು ಅಧ್ಯಕ್ಷತೆಯಲ್ಲಿ ಕುಂಬ್ರ ನವೋದಯ ರೈತ ಸಭಾಭವನದಲ್ಲಿ ಜೂ. 27 ರಂದು ನಡೆಯಿತು.


ಸಂಘದ ಕಾರ್ಯದರ್ಶಿ ಕೆ. ಶೇಖರ್ 2022-23 ನೇ ಸಆಲಿನ ವರದಿಯನ್ನು ವಾಚಿಸಿದರು. ಸಂಘವು ವಾರ್ಷಿಕವಾಗಿ 40,43,178 ಲಕ್ಷ ವ್ಯವಹಾರವನ್ನು ಮಾಡಿದ್ದು ಇದರಲ್ಲಿ 1,10,167 ಲಕ್ಷ ರೂ ನಿವ್ವಳ ಲಾಭವನ್ನು ಗಳಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸರಕಾರದಿಂದ ಸಿಗುವ ಸಕಲ ಸೌಲಭ್ಯವನ್ನು ಒಳಮೊಗ್ರು ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ನೀಡುವಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ. ಕಾಲಕಾಲಕ್ಕೆ ಬೇಕಾದ ಪಶು ಆಹಾರ, ಲಸಿಕೆಗಳನ್ನು ಸಂಘದಿಂದ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.

ಯುವಜನತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ: ರಕ್ಷಿತ್ ರೈ
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎ ರಕ್ಷಿತ್ ರೈ ಮುಗೇರು ಈ ವರ್ಷ ಸಂಘಕ್ಕೆ 8 ಸಾವಿರ ಲೀಟರ್ ಹಾಲಿನ ಕೊರತೆಯಾಗಿದೆ. ಹಾಲು ನೀಡದಿರುವ 36 ಮಂದಿಯನ್ನು ಸಂಘದಿಂದ ಕೈಬಿಡಲಾಗಿದೆ, ಹೊಸದಾಗಿ 13 ಮಂದಿ ಸದಸ್ಯರು ಸೇರ್ಪಡೆಗೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ಯತೇಚ್ಚ ಅವಕಾಶಗಳಿದ್ದು ಸರಕಾರದಿಂದ ಸಕಲ ಸೌಲಭ್ಯಗಳೂ ಇದ್ದು ಯುವ ಜನತೆ ಹೈನುಗಾರಿಕೆಯತ್ತ ಒಲವು ತೋರಿಸಬೇಕಿದೆ ಎಂದು ಹೇಳಿದರು. ಹೈನುಗಾರಿಕೆ ಮಾಡುವವರು ವರ್ಷದ ಪೂರ್ತಿ ದಿನವೂ ಅವುಗಳ ಚಾಕರಿಯಲ್ಲೇ ಇರುತ್ತಾರೆ ಇದರಿಂದ ಲಾಭ ಕಡಿಮೆ ಇದ್ದರೂ ತೃಪ್ತಿ ಮತ್ತು ನೆಮ್ಮದಿಯನ್ನು ಕಾಣಲು ಸಾಧ್ಯವಾಗಿದೆ. ಹೆಚ್ಚು ಹೆಚ್ಚು ದನಗಳನ್ನು ಸಾಕಾಣಿಕೆ ಮಾಡಿದರೆ ಅದರಿಂದ ಉತ್ತಮ ಲಾಭವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.

ಕರುಸಾಕಾಣಿಕೆ ಯೋಜನೆ ಇದೆ: ನಾಗೇಶ್
ದ ಕ ಜಿ ಹಾಲು ಒಕ್ಕೂಟದ ಅಧಿಕಾರಿ ನಾಗೇಶ್‌ರವರು ದನಗಳನ್ನು ಸಾಕುವ ರೀತಿ ಮತ್ತು ಹಾಲಿನ ಗುಣಮಟ್ಟವನ್ನು ಹೆಚ್ಚಿಸುವ ಕುರಿತು ಮಾಹಿತಿ ನೀಡಿದರು. ಹಾಲು ಒಕ್ಕೂಟದಿಂದ ಕರು ಸಾಕಾಣಿಕೆ ಯೋಜನೆಯನ್ನು ತರಲಾಗಿದ್ದು ಮನೆಯಲ್ಲಿ ದನಗಳು ಹೆಣ್ಣು ಕರು ಹಾಕಿದರೆ ಸಂಘದಲ್ಲಿ ನೋಂದಣಿ ಮಾಡಿಸಬೇಕು ಆ ಮೂಲಕ ಮೂರು ತಿಂಗಳ ಕರುವಿನ ಆಹಾರವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇಂದಿನ ಕರುವೇ ಮುಂದಿನ ಹಸು ಎಂಬಂತೆ ನಾವು ಅದನ್ನು ಸಲಹಬೇಕಿದೆ. ಜನುವಾರು ವಿಮೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು, ವರ್ಷಕ್ಕೆ 312 ರೂ ಪಾವತಿ ಮಡಿದರೆ 30 ಸಾವಿರ ವಿಮೆ ಸೌಲಭ್ಯವಿದೆ. ಹಾಲಿನ ಗುಣಮಟ್ಟವನ್ನು ಹೆಚ್ಚಿಸಲು ನಾವು ಅವುಗಳಿಗೆ ಕಾಲಕಾಲಕ್ಕೆ ಬೇಕಾದ ಆಹಾರವನ್ನು ನೀಡಬೇಕು ಎಂದು ಹೇಳಿದರು.

16 ತಿಂಗಳು ಆಗದೆ ಇಂಜೆಕ್ಷನ್ ಕೊಡಬೇಡಿ: ಡಾ. ಅನುದೀಪ್
ನಾವು ಸಾಕುವ ಕರುವಿಗೆ 16 ತಿಂಗಳು ಪೂರ್ತಿಯಾಗದೆ ಗರ್ಬದ ಇಂಜೆಕ್ಷನ್ ನೀಡಬೇಡಿ. ಇದರಿಂದ ಕರುವಿನ ಆರೋಗ್ಯದ ಮೇಲೆ ಮತ್ತು ಹಾಲಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಹಿಂಡಿಯನ್ನು ನೀರು ಸೇರಿಸಿ ನೀಡಬೇಡಿ ಎಂದು ಸಲಹೆ ನೀಡಿದರು.

ಸನ್ಮಾನ
ಸಂಘದ ಪಶು ಆಹಾರ ಗೋದಾಮಿಗೆ ಮರದ ಹಲಗೆಯನ್ನು ಉಚಿತವಾಗಿ ನೀಡಿದ ಉದ್ಯಮಿ ಅಶೋಕ್ ಪೂಜಾರಿ ಬೊಳ್ಳಾಡಿಯವರಿಗೆ ಸಂಘದ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ಅತೀ ಹೆಚ್ಚು ಹಾಲು ಪೂರೈಕೆ ಮಾಡಿರುವ ಸಂಘದ ಸದಸ್ಯ ಸುಧಾಕರ ಶೆಟ್ಟಿ ಎರ್ಕರವರು ಪ್ರಥಮ ಸ್ಥಾನ ಹಾಗೂ ಅನಿತಾರವರು ದ್ವಿತಿಯ ಸ್ಥಾನವನ್ನು ಪಡೆದುಕೊಂಡಿದ್ದು ಅವರಿಬ್ಬರಿಗೂ ಸಂಘದ ವತಿಯಿಂದ ಬಹುಮಾನವನ್ನು ನೀಡಲಾಯಿತು.ಉಳಿದ ಸದಸ್ಯರುಗಳಿಗೆ ಛತ್ರಿಯನ್ನು ಪ್ರೋತ್ಸಾಹಕರ ಬಹುಮಾನವಾಗಿ ನೀಡಲಾಯಿತು.


ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸುಧಾಕರ ಶೆಟ್ಟಿ, ಸದಸ್ಯರುಗಳಾದ ಮೋಹನ್‌ದಾಸ್ ರೈ ಕೆ, ದಿನೇಶ್ ರೈ, ಕೆ, ಕೆ. ವಸಂತ ಶೆಟ್ಟಿ, ಸುಗುಣ, ವಾರಿಜಾಕ್ಷಿ ಪಿ ಶೆಟ್ಟಿ, ಅದ್ದುಯಾನೆ ಅದ್ರಾಮ, ಕರುಣಾಕರ ಶೇನವ, ಚಂದ್ರಶೇಖರ ಎಂ ಉಪಸ್ಥಿತರಿದ್ದರು.
ಅಧ್ಯಕ್ಷರಾದ ಎ ರಕ್ಷಿತ್ ರೈ ಸ್ವಾಗತಿಸಿದರು. ಕಾರ್ಯದರ್ಶಿ ಶೇಖರ ಕೆ ವಂದಿಸಿದರು. ಸಿಬಂದಿಗಳಾದ ನಳಿನಿ ರೈ, ಸುಶ್ಮಾಕುಮಾರಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here